ಸುಬ್ರಹ್ಮಣ್ಯದಲ್ಲಿ ನಮ್ಮ ಗ್ರಾಮ – ನಮ್ಮ ಹೆಮ್ಮೆ ಅಭಿಯಾನದ ಗ್ರಾಮ ಸಮಿತಿ ರಚನೆ ಅಶೋಕ್ ಕುಮಾರ್ ಅಧ್ಯಕ್ಷ ; ಎ.ಎ.ತಿಲಕ್ ಕಾರ್ಯಾಧ್ಯಕ್ಷ
ಸುಬ್ರಹ್ಮಣ್ಯ ಗ್ರಾಮದಲ್ಲಿ ನಮ್ಮ ಗ್ರಾಮ – ನಮ್ಮ ಹೆಮ್ಮೆ ಅಭಿಯಾನ ನಡೆಸುವ ಕುರಿತು ಪೂರ್ವಭಾವಿ ಸಭೆ ಮಾ.3 ರಂದು ಸುಬ್ರಹ್ಮಣ್ಯ ಗ್ರಾ.ಪಂ.ಕಚೇರಿ ಸಭಾಂಗಣದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಜಾತ ಕಲ್ಲಾಜೆ ವಹಿಸಿದ್ದರು.
ಗ್ರಾ.ಪಂ.ಉಪಾಧ್ಯಕ್ಷ ರಾಜೇಶ್ ಎನ್.ಎಸ್. , ಐನೆಕಿದು ಸುಬ್ರಹ್ಮಣ್ಯ ಪ್ರಾ.ಕೃ.ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಚ್.ಎಲ್.ವೆಂಕಟೇಶ್, ಗ್ರಾ.ಪಂ.ಸದಸ್ಯರುಗಳಾದ ಹರೀಶ್ ಇಂಜಾಡಿ, ಭಾರತಿ ದಿನೇಶ್, ಕು.ಸೌಮ್ಯ , ದಿಲೀಪ್ ಉಪ್ಪಳಿಕೆ, ಮಾಜಿ ತಾ.ಪಂ.ಸದಸ್ಯೆ ಶ್ರೀಮತಿ ವಿಮಲಾ ರಂಗಯ್ಯ, ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ತ್ರಿವೇಣಿ ದಾಮ್ಲೆ, ಸಮೃದ್ಧಿ ಸಂಸ್ಥೆಯ ಸೀನಿಯರ್ ಮೇನೇಜರ್ ಶ್ರೀಮತಿ ಸ್ಮಿತಾ ರಾವ್, ಕುಲ್ಕುಂದ ಬಸವೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಗಿರಿಧರ ಸ್ಕಂದ, ಬಿ.ಜೆ.ಪಿ. ಗ್ರಾಮ ಸಮಿತಿ ಮಾಜಿ ಅಧ್ಯಕ್ಷ ಅಚ್ಚುತ ಗೌಡ ಕುಕ್ಕಪ್ಪನಮನೆ, ಫೋಟೋಗ್ರಾಫರ್ಸ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಲೋಕೇಶ್ ಬಳ್ಳಡ್ಕ, ನಿವೃತ್ತ ಉಪನ್ಯಾಸಕ ಡಾ.ಎ.ಎ.ತಿಲಕ್, ಮಾಸ್ಟರ್ ಪ್ಲ್ಯಾನ್ ಸಮಿತಿ ಸದಸ್ಯ ಪವನ್ ಎಂ.ಡಿ., ಸುಬ್ರಹ್ಮಣ್ಯದ ಸುದ್ದಿ ವಿತರಕ ಬಸವರಾಜ ಎಸ್.ಟೊಂಗಳ್, ನಿವೃತ್ತ ಪ್ರಾಂಶುಪಾಲ ಅಶೋಕ್ ಕುಮಾರ್ ಮೂಲೆಮಜಲು, ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ವಿಶ್ವನಾಥ ನಡುತೋಟ, ಪತ್ರಕರ್ತ ಶಿವಕುಮಾರ್ ಎಸ್.ಕೆ., ಶ್ರೀಮತಿ ಶೋಭಾ ನಲ್ಲೂರಾಯ, ಶ್ರೀಮತಿ ಸುಜಾತ ಗಣೇಶ್, ಎಂ.ಬಿ.ಕೆ. ಶ್ರೀಮತಿ ಹೇಮಾವತಿ ಎ., ಸಂಜೀವಿನಿ ಒಕ್ಕೂಟದ ಶ್ರೀಮತಿ ರತ್ನಾವತಿ ಸಭೆಯಲ್ಲಿ ಭಾಗವಹಿಸಿದ್ದರು.

ಸುದ್ದಿ ಬಿಡುಗಡೆ ಸಂಪಾದಕ ಹರೀಶ್ ಬಂಟ್ವಾಳ್ ರವರು , ಸುದ್ದಿ ಬಿಡುಗಡೆ ಪತ್ರಿಕೆಗೆ 40 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಪ್ರತೀ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗುತ್ತಿರುವ ನಮ್ಮ ಗ್ರಾಮ – ನಮ್ಮ ಹೆಮ್ಮೆ ಅಭಿಯಾನದ ಕುರಿತು ವಿವರ ನೀಡಿದರು.
ಸೇರಿದ್ದ ಎಲ್ಲ ಪ್ರಮುಖರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಅಭಿಯಾನ ಯಶಸ್ವಿಗೊಳಿಸುವ ಭರವಸೆ ನೀಡಿದರು.
ಸಮಿತಿ ರಚನೆ
ಬಳಿಕ ಅಭಿಯಾನಕ್ಕೆ ಗ್ರಾಮ ಸಮಿತಿ ರಚಿಸಲಾಯಿತು.
ಗೌರವಾಧ್ಯಕ್ಷರಾಗಿ ಕೆ.ಎಸ್.ಎನ್.ಉಡುಪ ಹಾಗೂ ಸುದರ್ಶನ್ ಜೋಯಿಸ, ಅಧ್ಯಕ್ಷರಾಗಿ ಅಶೋಕ್ ಕುಮಾರ್ ಮೂಲೆಮಜಲು ಪರ್ವತಮಕ್ಕಿ, ಕಾರ್ಯಾಧ್ಯಕ್ಷರಾಗಿ ಡಾ.ತಿಲಕ್ ಎ.ಎ., ಸಂಚಾಲಕರಾಗಿ ರಾಜೇಶ್ ಎನ್.ಎಸ್., ಸಂಯೋಜಕರಾಗಿ ಹರೀಶ್ ಇಂಜಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಪವನ್ ಎಂ.ಡಿ., ಕೋಶಾಧಿಕಾರಿಯಾಗಿ ಶ್ರೀಮತಿ ಭಾರತಿ ದಿನೇಶ್, ಜತೆ ಕಾರ್ಯದರ್ಶಿಯಾಗಿ ಎಚ್.ಎಲ್.ವೆಂಕಟೇಶ್ ಆಯ್ಕೆಯಾದರು. ಉಪಾಧ್ಯಕ್ಷರುಗಳಾಗಿ ವಿಮಲಾ ರಂಗಯ್ಯ, ನಾರಾಯಣ ಅಗ್ರಹಾರ, ಸೌಮ್ಯ, ತ್ರಿವೇಣಿ ದಾಮ್ಲೆ, ರವೀಂದ್ರ ರುದ್ರಪಾದ, ಯಜ್ಞೇಶ್ ಆಚಾರ್, ಶೋಭಾ ನಲ್ಲೂರಾಯ, ಗಿರಿಧರ ಸ್ಕಂದ, ಅಚ್ಚುತ ಗೌಡ, ಮೋಹನದಾಸ ರೈ, ಶಿವರಾಮ ರೈ, ಸ್ಮಿತಾ ರಾವ್, ವಿಶ್ವನಾಥ ನಡುತೋಟ ಆಯ್ಕೆಯಾದರು. ಎಂ.ಬಿ.ಕೆ. ಹೇಮಾವತಿ, ಸಂಜೀವಿನಿ ಒಕ್ಕೂಟದ ರತ್ನಾವತಿ, ಪಂಚಾಯತ್ ನ ಇತರ ಸದಸ್ಯರು, ಗ್ರಾಮದ ಸಹಕಾರಿ ಸಂಘ ನಿರ್ದೇಶಕರು, ಸಂಘ ಸಂಸ್ಥೆಗಳ ಅಧ್ಯಕ್ಷರುಗಳು ಸದಸ್ಯರಾಗಿರುವ ಸಮಿತಿ ರಚಿಸಲಾಯಿತು.