Home Blog Page 2257

ಅಜ್ಜಾವರ : ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆಗೆ ಪೂರ್ವಭಾವಿ ಸಭೆ

0

 

ಪ್ರತೀ‌ ಮನೆಯಲ್ಲೂ ರಾಷ್ಟ್ರ ಧ್ವಜ ಹಾರಿಸಲು ಸಂಕಲ್ಪ

ಅಜ್ಜಾವರ ಗ್ರಾಮ ಪಂಚಾಯಿತಿಯಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಆಚರಣೆ ಮತ್ತು ಮನೆ ಮನೆಗೆ ರಾಷ್ಟ್ರ ಧ್ವಜ ವಿತರಣೆಯ ಕುರಿತು ಪೂರ್ವಭಾವಿ ಸಭೆ ಅಜ್ಜಾವರ ಪಂಚಾಯತ್ ನಲ್ಲಿ ನಡೆಯಿತು.

ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸತ್ಯವತಿ ಬಸವನಪಾದೆ ಮತ್ತು ಉಪಾಧ್ಯಕ್ಷರಾದ ಲೀಲಾ ಮನಮೋಹನ್ ಮುಡೂರು,ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಆಶಾಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದವರು, ಅಂಗನವಾಡಿ ಕಾರ್ಯಕರ್ತರು, ಪಂಚಾಯತ್ ಸಿಬ್ಬಂದಿ ವರ್ಗ ಮತ್ತು ಗ್ರಾಮಸ್ಥರು ಹಾಜರಿದ್ದರು.

ಪ್ರತೀ ಮನೆಯಲ್ಲೂ ರಾಷ್ಟ್ರ ಧ್ವಜ ಹಾರಿಸಲು ಸಂಕಲ್ಪ ಕೈಗೊಳ್ಳಲಾಯಿತು.

ಸುಬ್ರಹ್ಮಣ್ಯ :3000 ಧ್ವಜ ಹಾರಿಸಲು ಸಿದ್ದ

0

 

ಗ್ರಾ.ಪಂ ಸದಸ್ಯರಿಗೆ ಹಂಚಿಕೆ ಉಸ್ತುವಾರಿ

‘ ಹರ್ ಘರ್ ತಿರಂಗ ‘ ಆಜಾದಿ ಕಿ ಅಮೃತ ಮಹೋತ್ಸವ ಅಂಗವಾಗಿ ಪ್ರತಿ ಮನೆ ಮನೆಗೂ ಧ್ವಜ ಹಂಚುವ ಮುಖಾಂತರ ಪ್ರತಿ ಮನೆಯಲ್ಲು ಆಗಸ್ಟ್ 13ರಿಂದ 15ರವರೆಗೆ ಧ್ವಜ ಹಾರಿಸಿ ರಾಷ್ಟ್ರದ ಹಬ್ಬವನ್ನು ಆಚರಿಸುವ ಉದ್ದೇಶದಿಂದ ಸಂಜೀವಿನಿ ಒಕ್ಕೂಟ ಸಹಕಾರದಿಂದ 3000 ಧ್ವಜವನ್ನು ಸಿದ್ದಪಡಿಸಲಾಗಿದೆ. ಅದನ್ನು ಇಂದು ಗ್ರಾ.ಪಂ ಸದಸ್ಯರಿಗೆ ಮತ್ತು ಸ್ಥಳೀಯರಿಗೆ ವಿತರಿಸಲಾಯಿತು. ಗ್ರಾ.ಪಂ ಅಧ್ಯಕ್ಷೆ ಲಲಿತಾ ಗುಂಡಡ್ಕ, ಗ್ರಾ.ಪಂ ಕಾರ್ಯದರ್ಶಿ ಮೋನಪ್ಪ ಸುಬ್ರಹ್ಮಣ್ಯ, ಗ್ರಾ.ಪಂ ಸದಸ್ಯರು, ಮತ್ತಿತರರು ಉಪಸ್ಥಿತರಿದ್ದರು.

ಹೊದ್ದೆಟ್ಟಿ ಚೆನ್ನಪ್ಪ ಗೌಡ ನಿಧನ

0

ಚೆಂಬು ಗ್ರಾಮದ ಹೊದ್ದೆಟ್ಟಿ ಚೆನ್ನಪ್ಪ ಗೌಡರವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಅವರಿಗೆ  85 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ, ಓರ್ವ ಪುತ್ರ, ಐವರು ಪುತ್ರಿಯನ್ನು ಅಗಲಿದ್ದಾರೆ.

ಐವರ್ನಾಡು: ನಿಸರ್ಗ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ

0

 

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಐವರ್ನಾಡಿನ ನಿಸರ್ಗ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮವು ಆ.9ರಂದು ಜರುಗಿತು.


ಕಾರ್ಯಕ್ರಮವನ್ನು ಐವರ್ನಾಡು ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಶ್ರೀಮತಿ ಸುಜಾತ ಪವಿತ್ರಮಜಲು ಉದ್ಘಾಟಿಸಿದರು. ಜ್ಞಾನವಿಕಾಸ ಕೇಂದ್ರದ ಅಧ್ಯಕ್ಷೆ ಶ್ರೀಮತಿ ಶೇಷಮ್ಮ ಅಧ್ಯಕ್ಷತೆ ವಹಿಸಿದ್ದರು.
ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ವೇದಾ ಹರೀಶ್ ಶೆಟ್ಟಿ ನೆಕ್ರಾಜೆ, ವಲಯ ಮೇಲ್ವಿಚಾರಕ ವಸಂತ, ತಾಲೂಕು ಸಮನ್ವಯಾಧಿಕಾರಿ ಶ್ರೀಮತಿ ಭಾರತಿ, ದೇರಾಜೆ ಸ.ಕಿ.ಪ್ರಾ.ಶಾಲಾ ಸಹಶಿಕ್ಷಕಿ ರೇಷ್ಮಾ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಬಳಿಕ ವಿವಿಧ ಮನೋರಂಜನಾ ಹಾಗೂ ಆಟೋಟ ಸ್ಪರ್ಧೆಗಳು ಜರುಗಿತು. ನಳಿನಿ ಸ್ವಾಗತಿಸಿ, ಪುಷ್ಪಾವತಿ ಸೇವಾಪ್ರತಿನಿಧಿ ಶ್ರೀಮತಿ ವನಿತ ಕಾರ್ಯಕ್ರಮ ನಿರೂಪಿಸಿದರು.

ರಾಜ್ಯಮಟ್ಟದ ಕೆಸರುಗದ್ದೆ ಹಗ್ಗ ಜಗ್ಗಾಟ ನಾಗಶ್ರೀ ಫ್ರೆಂಡ್ಸ್ ಕ್ಲಬ್ ಸುಳ್ಯ ಮಹಿಳೆಯರ ತಂಡ ಪ್ರಥಮ

0

 

ಜಿಲ್ಲಾ ಪಂಚಾಯತ್ ಕೊಡಗು ಜಿಲ್ಲಾಡಳಿತ ಕೊಡಗು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಜಿಲ್ಲಾ ಯುವ ಒಕ್ಕೂಟ ಮಡಿಕೇರಿ ವಿರಾಜಪೇಟೆ ಮತ್ತು ಸೋಮವಾರಪೇಟೆ ತಾಲೂಕು ಯುವ ಒಕ್ಕೂಟ ಹಾಗೂ ಕಾವೇರಿ ಯುವಕ ಸಂಘ ಕಗ್ಗೋಡು ಇದರ ಜಂಟಿ ಆಶ್ರಯದಲ್ಲಿ ಜುಲೈ 23ರಂದು ನಡೆದ ರಾಜ್ಯಮಟ್ಟದ ಕೆಸರುಗದ್ದೆ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಸುಳ್ಯದ ನಾಗಶ್ರೀ ಫ್ರೆಂಡ್ಸ್ ಕ್ಲಬ್ ಸುಳ್ಯ ಮಹಿಳೆಯರ ತಂಡ ಪ್ರಥಮ ಸ್ಥಾನ ಪಡೆದಿದೆ .

ನಾಗಶ್ರೀ ಫ್ರೆಂಡ್ಸ್ ಕ್ಲಬ್ ಸುಳ್ಯದ ಮಹಿಳಾ ಸದಸ್ಯರು ಈ ಹಿಂದೆ ಬೆಳ್ತಂಗಡಿಯ ಆರಿ ಕೋಡಿ ಸುಳ್ಯದ ಬೂಡು ಭಗವತಿ ಕ್ಷೇತ್ರದಲ್ಲಿ ವಿಶ್ವ ಹಿಂದು ಪರಿಷತ್ ಭಜರಂಗದಳದವರು ಹಮ್ಮಿಕೊಂಡಿರುವ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದೆ ಅಲ್ಲದೆ ಕೊಡಗು ಜಿಲ್ಲೆಯ ಪ್ಲಾಂಟರ್ಸ್ ಕ್ಲಬ್ ಬಿಳಿಗೇರಿ ಹಾಗೂ ಅರ್ವತೊಕ್ಲು ನಲ್ಲಿ ನಡೆದ ರಾಜ್ಯಮಟ್ಟದ ಎರಡನೇ ವರ್ಷದ ಮುಕ್ತ ಕೆಸರುಗದ್ದೆ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯಕ್ಕೆ ಪ್ರಥಮ ಸ್ಥಾನದೊಂದಿಗೆ ಪ್ರಶಸ್ತಿ ಪಡೆದಿದೆ ಅದೇ ರೀತಿ ಮಡಿಕೇರಿಯ ಬೇಕೋಟ್ ಮಕ್ಕ ಯೂತ್ ಕ್ಲಬ್ ಅರ್ವತೊಕ್ಲು ಎರಡನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಪಡೆಯುವುದರೊಂದಿಗೆ ಪ್ರಶಸ್ತಿಯ ಗರಿ ಮುಡಿಗೇರಿಸಿದೆ ತಂಡದ ನಾಯಕಿಯಾದ ತಿಲಕ ನವೀನ್ ಪೈಚಾರು ತಂಡದ ನೇತೃತ್ವವನ್ನು ವಹಿಸಿದ್ದರು ತಂಡದಲ್ಲಿ ರಮ್ಯಾ ಪವನ್ ಉಳುವಾರು ಚಂಪಾ ಕಿರಣ್ ಉಬರಡ್ಕ ಕುಮಾರಿ ಧರ್ಮ ಅಂಬೆಕಲ್ಲು ಮಮತಾ ದೇವಕುಮಾರ್ ಉತ್ರಂಬೆ ಲತಾ ರಾಧಾಕೃಷ್ಣ ನಾರ್ಕೋಡು ಪ್ರಮೀಳಾ ಕುಸುಮಾದರ ಕಲ್ಲಾಜೆ ಹೇಮಾವತಿ ಕುಶಾಲಪ್ಪ ಅಕ್ಷತಾ ಚನ್ನಕೇಶವ ಇವರುಗಳು ನಾಗಶ್ರೀ ಫ್ರೆಂಡ್ಸ್ ಕ್ಲಬ್ ಸುಳ್ಯದ ತಂಡದಲ್ಲಿರುತ್ತಾರೆ

ಕೆ. ವಿ.ಜಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಸುಳ್ಯ :ರಾಷ್ಟ್ರಧ್ವಜ ಬಳಕೆ ಮಾಹಿತಿ ಮತ್ತು ವಿತರಣೆ ಕಾರ್ಯಕ್ರಮ

0

 

75ನೇ ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸವದ ಅಂಗವಾಗಿ ಮನೆ ಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸುವ ನಿಟ್ಟಿನಲ್ಲಿ, ಕೇಂದ್ರ ಸರಕಾರದ ‘ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಸಂಸ್ಥೆಯ ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ ಆ. 10ರಂದು ರಾಷ್ಟ್ರಧ್ವಜ ವಿತರಣೆ ಮಾಡಲಾಯಿತು.

ಧ್ವಜ ವಿತರಣೆ ಕಾರ್ಯಕ್ರಮವನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ರಿ., ಸುಳ್ಯ ಇದರ ಅಧ್ಯಕ್ಷರಾದ ಡಾ. ಕೆ. ವಿ. ಚಿದಾನಂದ ನಡೆಸಿಕೊಟ್ಟರು. ಸಂಸ್ಥೆಯ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ. ವಿ. ಯವರು ‘ಹರ್ ಘರ್ ತಿರಂಗಾ’ ಕಾರ್ಯಕ್ರಮದ ಪ್ರಾಮುಖ್ಯತೆಯನ್ನು ತಿಳಿಸುವುದರ ಜೊತೆಗೆ ಕಾಲೇಜಿನ ಎಲ್ಲಾ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವುದರ ಮೂಲಕ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಾರರಿಗೆ ಗೌರವವನ್ನು ಸಲ್ಲಿಸಬೇಕಾಗಿ ವಿನಂತಿಸಿಕೊಂಡರು. ಕಾರ್ಯಕ್ರಮದಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ರಿ.ಸುಳ್ಯ ಇದರ ಸದಸ್ಯರಾದ ಶ್ರೀಮತಿ. ಶೋಭಾ ಚಿದಾನಂದ, ಅಕ್ಷಯ್ ಕೆ. ಸಿ., ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಕಾರ್ಯದರ್ಶಿ ಕೆ. ವಿ. ಹೇಮನಾಥ್, ಕೆವಿಜಿ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ಜಗದೀಶ್ ಅಡ್ತಲೆ ಭಾಗವಹಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು, ಸ್ನಾತಕೋತರ ವಿದ್ಯಾರ್ಥಿಗಳು ಉಪಸ್ಥಿತರಿದ್ದು, ರಾಷ್ಟ್ರಧ್ವಜವನ್ನು ಪಡೆದುಕೊಂಡರು.

ಕೋಲ್ಚಾರು ಸ್ತ್ರೀಶಕ್ತಿ ಸಂಘಕ್ಕೆ ರಾಷ್ಟ್ರ ಧ್ವಜ ವಿತರಣೆ

0

ಕೋಲ್ಚಾರು ಅಂಗನವಾಡಿ ಕೇಂದ್ರದಲ್ಲಿ ಆಲೆಟ್ಟಿ ಪಂಚಾಯತ್ ವತಿಯಿಂದ ನೀಡುವ ರಾಷ್ಟ್ರ ಧ್ವಜವನ್ನು ಪಂಚಾಯತ್ ಉಪಾಧ್ಯಕ್ಷ ದಿನೇಶ್ ಕಣಕ್ಕೂರು ಹಸ್ತಾಂತರಿಸಿದರು. ಸ್ಥಳೀಯ ಸ್ತ್ರೀ ಶಕ್ತಿ ಸಂಘ ದ ಸದಸ್ಯರ ಮೂಲಕ ಮನೆ ಮನೆಗೆ ರಾಷ್ಟ್ರ ಧ್ವಜ ವಿತರಿಸುವ ಜವಬ್ದಾರಿ ವಹಿಸಿಕೊಡಲಾಯಿತು.

ಆಲೆಟ್ಟಿ ಪಂಚಾಯತ್ ವತಿಯಿಂದ ರಾಷ್ಟ್ರಧ್ವಜ ಹಸ್ತಾಂತರ

0

 

 

ಸ್ಥಳೀಯ ವಾರ್ಡ್ ಸದಸ್ಯರ ಮತ್ತು ಸಂಘ ಸಂಸ್ಥೆಗಳ ಮುಖಾಂತರ ಮನೆ ಮನೆಗೆ ವಿತರಣೆ

75 ನೇ ಸ್ವಾತಂತ್ರೋತ್ಸವ ಅಮೃತ ಮಹೋತ್ಸವ ಅಂಗವಾಗಿ ಮನೆ ಮನೆಗಳಲ್ಲಿ ರಾಷ್ಟ್ರ ಧ್ವಜ ಹಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಹರ್ ಘರ್ ತಿರಂಗಾ ಅಭಿಯಾನ ನಡೆಸುತ್ತಿದ್ದು ಆಲೆಟ್ಟಿ ಪಂಚಾಯತ್ ವತಿಯಿಂದ ಪ್ರತಿ ಮನೆಗಳಿಗೆ ರಾಷ್ಟ್ರ ಧ್ವಜ ಹಂಚುವ ಕಾರ್ಯಕ್ಕೆ ಆ.10 ರಂದು ಚಾಲನೆ ನೀಡಲಾಯಿತು. ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಕುಡೆಕಲ್ಲು ರಾಷ್ಟ್ರಧ್ವಜ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಪಂಚಾಯತ್ ಉಪಾಧ್ಯಕ್ಷ ದಿನೇಶ್ ಕಣಕ್ಕೂರು ಮತ್ತು ಸದಸ್ಯರಾದ ಮುತ್ತಪ್ಪ ಪೂಜಾರಿ ಮೊರಂಗಲ್ಲು, ಶಿವಾನಂದ ರಂಗತ್ತಮಲೆ, ಗೀತಾ ಕೋಲ್ಚಾರು, ಸತ್ಯಕುಮಾರ್ ಆಡಿಂಜ, ರತೀಶನ್ ಅರಂಬೂರು, ಚಂದ್ರಕಾಂತ ನಾರ್ಕೋಡು, ಮೀನಾಕ್ಷಿ ಕುಡೆಕಲ್ಲು, ಕುಸುಮಾವತಿ ಬಿಲ್ಲರಮಜಲು,ವೀಣಾ ವಸಂತ ಆಲೆಟ್ಟಿ, ವೇದಾವತಿ ನೆಡ್ಚಿಲು,ಅನಿತಾ ಅರಂಬೂರು, ಭಾಗೀರಥಿ ಪತ್ತುಕುಂಜ, ಶಂಕರಿ ಕೊಲ್ಲರಮೂಲೆ, ಪಿ.ಡಿ.ಒ ಕೀರ್ತಿ ಪ್ರಸಾದ್ ಹಾಗೂ ಪಂಚಾಯತ್ ಸಿಬ್ಬಂದಿ ,ಸ್ಥಳೀಯ ಸಂಘ ಸಂಸ್ಥೆಗಳ ಸದಸ್ಯರು ಭಾಗವಹಿಸಿದರು.

ಅರಂಬೂರು : ನಿಂತಿದ್ದ ಬೈಕ್ ಗೆ ಬೈಕ್ ಡಿಕ್ಕಿ,  ಸವಾರ ಗಾಯ

0

 

 

 

ನಿಂತಿದ್ದ ಬೈಕ್ ಗೆ ಬೈಕ್ ಡಿಕ್ಕಿ ಹೊಡೆದು ಸವಾರ ಗಾಯಗೊಂಡ ಘಟನೆ ಅರಂಬೂರು ಬಳಿ ಸಂಭವಿಸಿದೆ.
ಅರಂಬೂರು ಬಳಿ ರಸ್ತೆ ಪಕ್ಕದಲ್ಲಿ ನಿಂತ ಬೈಕ್ ಗೆ ಸುಳ್ಯ ಕಡೆಯಿಂದ ಪೆರಾಜೆ ಹೋಗುತ್ತಿದ್ದ ವ್ಯಕ್ತಿ ನಿಯಂತ್ರಣ ತಪ್ಪಿ ಬಲ ಬದಿ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ ಬೈಕ್ ಗೆ ಗುದ್ದಿದ ಪರಿಣಾಮ ಸವಾರ ಗಾಯಗೊಂಡು ಸುಳ್ಯ ಸರಕಾರಿ ಆಸ್ಪತ್ರೆ ಗೆ ದಾಖಲಿಸಲಾಗಿದೆ .

ಗುತ್ತಿಗಾರು: ಅಮರ ಸಂಜೀವಿನಿ ಒಕ್ಕೂಟ ದಿಂದ 1500 ಧ್ವಜ

0

 

ಗ್ರಾ.ಪಂ ವತಿಯಿಂದ ಧ್ವಜ ಹಸ್ತಾಂತರ

‘ ಹರ್ ಘರ್ ತಿರಂಗ ‘ ಆಜಾದಿ ಕಿ ಅಮೃತ ಮಹೋತ್ಸವ ಅಂಗವಾಗಿ ಪ್ರತಿ ಮನೆ ಮನೆಗೂ ಧ್ವಜ ಹಂಚುವ ಮುಖಾಂತರ ಪ್ರತಿ ಮನೆಯಲ್ಲು ಆಗಸ್ಟ್ 13ರಿಂದ 15ರವರೆಗೆ ದ್ವಜ ಹಾರಿಸಿ ರಾಷ್ಟ್ರದ ಹಬ್ಬವನ್ನು ಆಚರಿಸುವ ಸಲುವಾಗಿ ಜಿಲ್ಲಾಡಳಿತದ ಸುಚನೆಯಂತೆ ಅಮರ ಸಂಜೀವಿನಿ ಒಕ್ಕೂಟ ದಿಂದ 1500 ದ್ವಜವನ್ನು ಒಕ್ಕೂಟ ಅಧ್ಯಕ್ಷೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಪಂಚಾಯತ್ ಅಧ್ಯಕ್ಷರಿಗೆ ಆ.8 ರಂದು
ಹಸ್ತಾಂತರಿಸಿದರು.


ಪಂಚಾಯತ್ ವತಿಯಿಂದ ಆ.9 ರಂದು ಧ್ವಜ ಬಿಡುಗಡೆ ಮಾಡಿ ಪ್ರತೀ ವಾರ್ಡ್ ಸದಸ್ಯರಿಗೆ ಧ್ವಜ ನೀಡಲಾಗಿದ್ದು ರಾಷ್ಟ್ರ ಧ್ವಜವನ್ನು ಪಡಕೊಂಡು ತಮ್ಮ ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜ ಹಾರಸಿ ರಾಷ್ಟ್ರದ ಘನತೆಯನ್ನು ಕಾಪಾಡುವಂತೆ ವಿನಂತಿಸಲಾಗಿದೆ.

error: Content is protected !!
Breaking