ಯೇನೆಕಲ್ಲು ಸಹಕಾರಿ ಸಂಘದ ಗೋದಾಮಿಗೆ ನೆರೆ ನೀರು ನುಗ್ಗಿ ಅಪಾರ ನಷ್ಟ

0

 

ಆ. 1ರಂದು ಸುರಿದ ರಣಮಳೆಗೆ ಯೇನೆಕಲ್ಲು ಭಾಗದಲ್ಲಿ ಹರಿಯುವ ಹೊಳೆಯ ನೀರಿನ ಮಟ್ಟ ಏರಿಕೆಯಾದುದರ ಪರಣಾಮ ಯೇನೆಕಲ್ಲು ಪ್ರಾಥಮಿಕ ಕೃ.ಪ.ಸ.ಸಂಘದ ಆವರಣದಲ್ಲಿ ನೀರು ನುಗ್ಗಿ ಗೋದಾಮು ಕಟ್ಟಡದಲ್ಲಿದ್ದ ಪಡಿತರ ಆಹಾರ ಸಾಮಗ್ರಿಗಳು ನೀರಿನಲ್ಲಿ ಒದ್ದೆಯಾಗಿ ಅಪಾರ ಹಾನಿ ಸಂಭವಿಸಿದೆ.
ಗೋದಾಮಿನಲ್ಲಿದ್ದ ಅಕ್ಕಿ ಮತ್ತಿತರ ಆಹಾರ ಸಾಮಾಗ್ರಿಗಳು, ಮೈಲುತುತ್ತು, ಸುಣ್ಣ, ಕೀಟನಾಶಕಗಳು, ನೀರಿನಲ್ಲಿ ಒದ್ದೆಯಾಗಿದೆ. ಆ. 1ರಂದು ಸುಮಾರು 9.15ರ ಅಂದಾಜಿಗೆ ನೀರಿನ ಮಟ್ಟ ಏರುತ್ತಾ ಬಂದಾಗ ಸಂಘದ ಅಧ್ಯಕ್ಷ ಭವಾನಿಶಂಕರ ಪೂಂಬಾಡಿ ಸೇರಿದಂತೆ ಸುಮಾರು 50ರಷ್ಟು ಮಂದಿ ಸಂಘದ ಬಳಿಗೆ ಬಂದರು. ಆದರೆ ಸಂಘದ ಬೀಗದ ಕೀ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರತನ್ ಕಲ್ಕುದಿಯವರ ಜೊತೆ ಇತ್ತು. ಅವರಿಗೆ ಹೊಳೆಯನ್ನು ದಾಟಿ ಬರಲು ಆಗದ ಕಾರಣ ಕೊನೆಗೆ ಸಂಘದ ಬಳಿ ಸೇರಿದವರೆಲ್ಲಾ ಗೋದಾಮಿನ ಕೀಯನ್ನು ಒಡೆದು ಗೋದಾಮನ್ನು ತೆರೆದು ಸಾಧ್ಯವಾದಷ್ಟು ಸಾಮಾಗ್ರಿಗಳನ್ನು ಸಂಘದ ಮೇಲಂತಸ್ತಿಗೆ ಹೊತ್ತು ಸಾಗಿಸಿದರೆನ್ನಲಾಗಿದೆ. ಆದರೂ ಸುಮಾರು 30ಚೀಲದಷ್ಟು ಅಕ್ಕಿ, ಮತ್ತಿತರ ಸಾಮಾಗ್ರಿಗಳು ನೀರಿನಲ್ಲಿ ಒದ್ದೆಯಾಗಿರುವುದಲ್ಲದೆ, ನಷ್ಟ ಪರಿಹಾರವನ್ನು ಸಂಬಂಧಪಟ್ಟ ಇಲಾಖೆಯವರು ನೀಡಿದರೆ ಸಂಘಕ್ಕಾಗುವ ನಷ್ಟ ಕಾಡಿಮೆಯಾಗಬಹುದೆಂದು ಸಂಘದ ಅಧ್ಯಕ್ಷ ಭವಾನಿಶಂಕರ ಪೂಂಬಾಡಿ ತಿಳಿಸಿದರು.