ಮಿತ್ತಮಜಲು ಅಪಘಾತ ಪ್ರಕರಣ :  ಆರೋಪಿ ದೋಷಮುಕ್ತ

0

 

ಮಿತ್ತಮಜಲಿನಲ್ಲಿ ನಡೆದ ಅಪಘಾತ ಪ್ರಕರಣ ಆರೋಪಿಯನ್ನು ದೋಷಮುಕ್ತಗೊಳಿಸಿ ನ್ಯಾಯಾಲಯ ತೀರ್ಪು ನೀಡಿದೆ.


2020ರ ಮೇ.13 ರಂದು ಮಧ್ಯಾಹ್ನ 12ಗಂಟೆಗೆ ನೆಲ್ಲೂರು ಕೆಮ್ರಾಜೆ ಗ್ರಾಮದ ಚೇತನ್ ಕುಮಾರ್ ಎಂಬುವವರು ಚಲಾಯಿಸುತ್ತಿದ್ದ ಕೆ.ಎ. 21ವೈ 4185 ವಾಹನದಲ್ಲಿ ಸುಳ್ಯ ಕಡೆಯಿಂದ ತನ್ನ ಸಹ ಸವಾರ ಶಶಿಕಾಂತ್ ಎಂಬವರನ್ನು ಕೂರಿಸಿಕೊಂಡು ಮಿತ್ತಮಜಲು ತಲುಪುತ್ತಿದ್ದಂತೆ ಸುಳ್ಯ ಕಡೆಗೆ ಬರುತ್ತಿದ್ದ ಪಿಕ್ ಅಪ್ ವಾಹನದ ಚಾಲಕ ಅತಿವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತಪ್ಪು ಬದಿಗೆ ಬಂದು ಮೋಟಾರ್ ಸೈಕಲ್ ಗೆ ಡಿಕ್ಕಿಪಡಿಸಿದ ಪರಿಣಾಮ ಮೋಟಾರ್ ಸೈಕಲ್ ಸವಾರ ಚೇತನ್ ಕುಮಾರ್ ನ ಎಡ ಮೊಣಕಾಲಿನ ಕೆಳಗೆ ಮತ್ತು ಬಲ ಮೊಣಕೈ ಹಾಗೂ ಹೊಟ್ಟೆಯ ಬಳಿ ಮತ್ತು ಸಹ ಸವಾರ ಶಶಿಕಾಂತ ನಿಗೆ ತಲೆ ಹಾಗೂ ಮುಖಕ್ಕೆ ರಕ್ತ ಗಾಯಗಳಾಗಿದ್ದು ಅವರನ್ನು ಚಿಕಿತ್ಸೆಗಾಗಿ ಸುಳ್ಯ ಸರಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆಗೊಳಪಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಶಶಿಕಾಂತ ನನ್ನು ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಈ ಅಪಘಾತವು ಪಿಕ್ ಅಪ್ ವಾಹನದ ಚಾಲಕನ ತಪ್ಪಿನಿಂದ ಸಂಭವಿಸಿದೆ ಎಂದು ಆರೋಪಿಸಿ ಚೇತನ್ ಕುಮಾರ್ ರವರ ಸಂಬಂಧಿ ಗಂಗಾಧರ್ ನೀಡಿದ ದೂರಿನ ಆಧಾರದಲ್ಲಿ ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 279,337,338 ಜೊತೆಗೆ 146, ಮತ್ತು 196 ಮೋಟಾರು ವಾಹನ ಕಾಯಿದೆ ಅಡಿಯಲ್ಲಿ ಶಿಕ್ಷಾರ್ಹವಾದ ಅಪರಾಧವೆಸಗಿದ್ದಾರೆ ಪ್ರಸ್ತುತ ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಈ ಆರೋಪವನ್ನು ಅಭಿಯೋಜನೆಯು ಸಾಬೀತುಪಡಿಸಲು ವಿಫಲವಾಗಿದೆ ಎಂದು ಪರಿಗಣಿಸಿ ಹಿರಿಯ ಸಿವಿಲ್ ಜಡ್ಜ್ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ಸೋಮಶೇಖರ ಎ.ರವರು ಆರೋಪಿ ಪ್ರದೀಪ್ ರವರನ್ನು ದೋಷಯುಕ್ತಗೊಳಿಸಿ ತೀರ್ಪು ನೀಡಿದ್ದಾರೆ. ಆರೋಪಿ ಪರವಾಗಿ ನ್ಯಾಯವಾದಿಗಳಾದ ಜಗದೀಶ್ ದಾಸನಕಜೆ ಹಾಗೂ ಸಂದೀಪ್ ಮೊಟ್ಟೆಮನೆ ವಳಲಂಬೆ  ವಾದಿಸಿದ್ದರು