ದುಗ್ಗಲಡ್ಕ‌ ದುಗ್ಗಲಾಯ ದೇವಸ್ಥಾನದ ನೇಮೋತ್ಸವದ ಸಲುವಾಗಿ ಮಾಣಿಬೆಟ್ಟು ಕುಂಞಪ್ಪ ಮಾಸ್ಟರ್ ಪುರುಷೋತ್ತಮ ಗೌಡ ದತ್ತಿನಿಧಿ ಸ್ಥಾಪನೆ

0


ದುಗ್ಗಲಡ್ಕದ ಶ್ರೀ ದುಗ್ಗಲಾಯ ದೈವಸ್ಥಾನದ ವಾರ್ಷಿಕ ನೇಮೋತ್ಸವದ ಸಲುವಾಗಿ ದುಗ್ಗಲಡ್ಕದ ಪ್ರಗತಿಪರ ಕೃಷಿಕರಾದ ಎಂ.ಕೆ. ಪುರುಷೋತ್ತಮ ಗೌಡ ಮಾಣಿಬೆಟ್ಟುರವರು ಮಾಣಿಬೆಟ್ಟು ಕುಂಞಪ್ಪ ಮಾಸ್ಟರ್ ಪುರುಷೋತ್ತಮ ಗೌಡ ದತ್ತಿನಿಧಿ ಸ್ಥಾಪಿಸಿದ್ದಾರೆ.


ಸುಳ್ಯದ ವೆಂಕಟರಮಣ ಸೊಸೈಟಿಯಲ್ಲಿ ಖಾತೆಯನ್ನು ತೆರೆದು ರೂ.1,05,000(ಒಂದು ಲಕ್ಷದ ಐದು ಸಾವಿರ)ಠೇವಣಿ ಇರಿಸಿದ್ದು ಇದರಿಂದ ಬರುವ ವಾರ್ಷಿಕ ಬಡ್ಡಿಯನ್ನು ವಾರ್ಷಿಕ ಜಾತ್ರೋತ್ಸವಕ್ಕೆ ಬಳಸಬಹುದಾಗಿದೆ. ಆಡಳಿತ ಸಮಿತಿಯವರು ಅಥವಾ ಮೊಕ್ತೇಸರರು ಜಾತ್ರಾ ಸಮಯದಲ್ಲಿ ಪುರುಷೋತ್ತಮ ಗೌಡರ ಮನೆಗೆ ಬಂದು ಠೇವಣಿಯ ಬಡ್ಡಿ ಹಣವನ್ನು ಪಡೆದು ರಶೀದಿ ನೀಡಬೇಕೆಂದು ದತ್ತಿನಿಧಿ ಪತ್ರದಲ್ಲಿ ದಾಖಲಿಸಲಾಗಿದೆ.


ಜೂ.22ರಂದು ದತ್ತಿನಿಧಿ ಪತ್ರವನ್ನು ಪುರು಼ಷೋತ್ತಮ ಗೌಡ ದಂಪತಿಗಳು ದುಗ್ಗಲಾಯ ದೈವಸ್ಥಾನ ಸಮಿತಿ ಅಧ್ಯಕ್ಷರಾದ ಸುಂದರ ರಾವ್ ಕೊಡೆಂಚಡ್ಕ,ಗೌರವಾಧ್ಯಕ್ಷ ದಯಾನಂದ ಸಾಲಿಯಾನ್ ಮೂಡೆಕಲ್ಲು, ಕಾರ್ಯದರ್ಶಿ, ಕುಶಾಲಪ್ಪಗೌಡ ಕಜೆಯವರಿಗೆ ಹಸ್ತಾಂತರಿಸಿದರು.