ಶಾರ್ಜಾದಲ್ಲಿ ನೆಲೆಸಿರುವ ರಾಜಾ ಸುಬ್ರಹ್ಮಣ್ಯಗೆ ಬೆಸ್ಟ್ ಅಂಪ್ಲಾಯಿ ಆಫ್ ದಿ ಈಯರ್ ಪುರಸ್ಕಾರ

0

ಶಾರ್ಜಾದ ನೆಲೆಸಿರುವ ಸುಬ್ರಹ್ಮಣ್ಯದ ರಾಜಾ ಸುಬ್ರಹ್ಮಣ್ಯ ಅವರಿಗೆ ಬೆಸ್ಟ್ ಅಂಪ್ಲಾಯಿ ಆಫ್ ದಿ ಈಯರ್ 2024 ಪುರಸ್ಕಾರ ಲಭಿಸಿದೆ.

ಶಾರ್ಜಾದ ಅಮೇರಿಕನ್ ಯುನಿವರ್ಸಿಟಿಯಲ್ಲಿ ಸ್ವಿಮ್ಮಿಂಗ್ ಮತ್ತು ಬಿಡಬ್ಲೂಎಫ್ ಬ್ಯಾಡ್‌ಮಿಂಟನ್ ಕೋಚ್ ಆಗಿರುವ ಇವರಿಗೆ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಅಮೇರಿಕನ್ ಯುನಿವರ್ಸಿಟಿಯ ಆಡಳಿತ ಮಂಡಳಿಯ ಅಧ್ಯಕ್ಷರು ಪುರಸ್ಕಾರ ಪ್ರಧಾನ ಮಾಡಿದರು. ತನ್ನ 25 ವರ್ಷದ ಸೇವೆಯಲ್ಲಿ 3ನೇ ಬಾರಿಗೆ ಈ ಪುರಸ್ಕಾರ ಪಡೆದಿದ್ದಾರೆ.


ಇದಲ್ಲದೆ ಕಳೆದ 25 ವರ್ಷಗಳಿಂದ ಅಮೇರಿಕನ್ ಯುನಿವರ್ಸಿಟಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇವರಿಗೆ 25ನೇ ವರ್ಷದ ಸೇವಾ ಪುರಸ್ಕಾರವೂ ಲಭಿಸಿದೆ. ಇವರು ಅಂತರಾಷ್ಟ್ರೀಯ ಮಟ್ಟದ ಬ್ಯಾಡ್‌ಮಿಂಟನ್ ರೆಫ್ರಿಯಾಗಿದ್ದಾರೆ.

ಸುಬ್ರಹ್ಮಣ್ಯ ಎಸ್‌ಎಸ್‌ಪಿಯು ಕಾಲೇಜಿನ ಹಿರಿಯ ವಿದ್ಯಾರ್ಥಿಯಾದ ಇವರು ಸುಬ್ರಹ್ಮಣ್ಯದ ಅಣ್ಣೋಜಿರಾವ್ ಮತ್ತು ಸೀತಮ್ಮ ದಂಪತಿಗಳ ಪುತ್ರ.ಪತ್ರಕರ್ತ ರತ್ನಾಕರ ಸುಬ್ರಹ್ಮಣ್ಯ ಅವರ ಸಹೋದರ.