ಚಾರ್ಟೆಡ್ ಅಕೌಂಟೆಂಟ್ ಆಶಿಶ್ ಆನಂದರಿಗೆ ಸುಳ್ಯ ರೋಟರಿ ಕ್ಲಬ್ ವತಿಯಿಂದ ಸನ್ಮಾನ

0

ರೋಟರಿ ಕ್ಲಬ್ ಸುಳ್ಯ ಇದರ ಪೂರ್ವ ಅಧ್ಯಕ್ಷರಾದ ರೊ. ಆನಂದ ಖಂಡಿ ಗ ಹಾಗೂ ಮುಳ್ಯ ಅಟ್ಲುರು ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಶೋಭಾರವರ ಪುತ್ರ ಆಶಿಶ್ ಆನಂದ್ ರವರು ಅಖಿಲ ಭಾರತ ಮಟ್ಟದ ಚಾರ್ಟೆಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು, ಇವರಿಗೆ ರೋಟರಿ ಕ್ಲಬ್ ಸುಳ್ಯದ ವತಿಯಿಂದ ಸನ್ಮಾನಿಸಲಾಯಿತು.


ಇವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಸಂತ ಜೋಸೆಫ್ ಪ್ರಾಥಮಿಕ ಶಾಲೆ ಸುಳ್ಯ, ಕೆವಿಜಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ಸುಳ್ಯ, ಪದವಿ ಪೂರ್ವ ಶಿಕ್ಷಣವನ್ನು ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿ ಮುಗಿಸಿ ಬೆಂಗಳೂರಿನ ಲೋಹಿತ್ ಅಕಾಡೆಮಿ ಕಾಲೇಜಿನಲ್ಲಿ ಬಿಕಾಂ ವಿದ್ ಸಿಎ ಕೋರ್ಸ್ ಮಾಡಿ ಹಾಗೂ ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಎನ್. ಸಿ. ಎಸ್. ರಾಘವನ್ ಚಾರ್ಟೆಡ್ ಅಕೌಂಟೆನ್ಸ್ ಕಂಪನಿಯಲ್ಲಿ ಮೂರು ವರ್ಷಗಳ ತರಬೇತಿ ಮುಗಿಸಿ ಇದೀಗ ಸಿಎ ಪದವಿ ಪಡೆದಿದ್ದಾರೆ.
ಸಭೆಯಲ್ಲಿ ಅಧ್ಯಕ್ಷೆ ರೊ. ಯೋಗಿತ ಗೋಪಿನಾಥ್, ಕಾರ್ಯದರ್ಶಿ ರೊ. ಡಾ. ಹರ್ಷಿತ ಪುರುಷೋತ್ತಮ್, ನಿಕಟಪೂರ್ವ ಅಧ್ಯಕ್ಷ ರೊ. ಆನಂದಖಂಡಿಗ, ನಿಯೋಜಿತ ಅಧ್ಯಕ್ಷ ರೊ. ಡಾ. ರಾಮ್ ಮೋಹನ್ ಹಾಗೂ ರೋಟರಿ ಸದಸ್ಯರು ಭಾಗವಹಿಸಿದ್ದರು.