ಸುಳ್ಯ ಶ್ರೀ ಚೆನ್ನಕೇಶವ ದೇವರಿಗೆ ಸಮರ್ಪಣೆಯಾಗಲಿರುವ ಬ್ರಹ್ಮರಥಕ್ಕೆ ಜಾಲ್ಸೂರಿನಲ್ಲಿ ಶ್ರೀ ಗುರು ರಾಘವೇಂದ್ರ ಭಜನಾ ಮಂದಿರ ಹಾಗೂ ವಿವಿದ ಸಂಘ ಸಂಸ್ಥೆಗಳು ಹಾಗೂ ಊರವರು ಅದ್ದೂರಿ ಸ್ವಾಗತ ನೀಡಿದರು. ಶ್ರೀ ಗುರು ರಾಘವೇಂದ್ರ ಭಜನಾ ಮಂದಿರದ ಅಧ್ಯಕ್ಷ ಜಯರಾಮ ರೈ ಜಾಲ್ಸೂರು ತೆಂಗಿನಕಾಯಿ ಒಡೆಯುವ ಮೂಲಕ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಡಾ. ಕೆ.ವಿ.ಚಿದಾನಂದ, ಕುಟುಂಬ ವರ್ಗ, ಬ್ರಹ್ಮರಥ ಸಮರ್ಪಣೆಯ ವಿವಿಧ ಸಂಚಾಲಕರು, ಭಜನಾ ಮಂದಿರದ ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಳು, ಊರವರ ಸಹಿತ ಉಪಸ್ಥಿತರಿದ್ದು, ರಥವನ್ನು ಬರಮಾಡಿಕೊಂಡರು.
ಜಯರಾಮ ರೈಯವರಿಗೆ ಡಾ. ಕೆ.ವಿ. ಚಿದಾನಂದರು ಶಾಲು ಹಾಕಿ ಗೌರವಿಸಿದರು.