ಮರ್ಕಂಜದಲ್ಲಿ ಸ್ಪೂರ್ತಿ ಸಂಜೀವಿನಿ ಮಹಿಳಾ ಟೈಲರಿಂಗ್ ಘಟಕ ಉದ್ಘಾಟನಾ ಕಾರ್ಯಕ್ರಮ

0

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಮಂಗಳೂರು ತಾಲೂಕು ಪಂಚಾಯತ್ ಸುಳ್ಯ, ಗ್ರಾಮ ಪಂಚಾಯತ್, ಮರ್ಕಂಜ ಹಾಗೂ ಪಂಚಶ್ರೀ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ, ಮರ್ಕಂಜ ಗ್ರಾಮ ಸುಳ್ಯ ತಾಲೂಕು ಇದರ ಆಶ್ರಯದಲ್ಲಿ ” ಸ್ಪೂರ್ತಿ ಸಂಜೀವಿನಿ” ಮಹಿಳಾ ಟೈಲರಿಂಗ್ ಘಟಕ ಉದ್ಘಾಟನಾ ಕಾರ್ಯಕ್ರಮವು ಮರ್ಕಂಜದ ಗುಂಡಿಯಲ್ಲಿ ಜ. 20 ರಂದು ನಡೆಯಿತು.


ಪಂಚಶ್ರೀ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಮರ್ಕಂಜ ಇದರ ಅಧ್ಯಕ್ಷೆ ಶ್ರೀಮತಿ ಪವಿತ್ರ ಗೋಳ್ಯಾಡಿ ಅಧ್ಯಕ್ಷತೆ ವಹಿಸಿದ್ದರು. ಮರ್ಕಂಜ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಗೀತಾ ಹೊಸೊಳಿಕೆ ದೀಪ ಬೆಳಗಿಸುವುದರ ಮೂಲಕ ಸ್ಫೂರ್ತಿ ಸಂಜೀವಿನಿ ಟೈಲರಿಂಗ್ ಘಟಕವನ್ನು ಉದ್ಘಾಟಿಸಿದರು.
ಸುಳ್ಯದ ಶ್ರೀ ಲಕ್ಷ್ಮೀ ಲೇಡೀಸ್ ಟೈಲರ್ ಶ್ರೀಮತಿ ಮಂಜುಳಾ ಬಡಿಗೇರ್, ಎಂಬ್ರಾಯ್ಡರಿ ತರಬೇತುದಾರೆ ಶ್ರೀಮತಿ ರಮ್ಯಾ ಕಲ್ಮಡ್, ಟೈಲರಿಂಗ್ ತರಬೇತುದಾರೆ ಶ್ರೀಮತಿ ಶಶಿಕಲಾ ಗುಂಡಿ ಸಂಪನ್ಮೂಲ ವ್ಯಕ್ತಿಗಳಾಗಿ ಉಪಸ್ಥಿತರಿದ್ದರು.

ಮುಖ್ಯ ಅತಿಥಿಗಳಾಗಿ ದ.ಕ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಜಯರಾಂ ಕೆ.ಇ., ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ, ಮರ್ಕಂಜ , ಎನ್.ಆರ್.ಎಲ್. ಎಂ.ನ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಶ್ರೀಮತಿ ಶ್ವೇತಾ, ವಲಯ ಮೇಲ್ವಿಚಾರಕ ಮಹೇಶ್ ಬಿ. ಉಪಸ್ಥಿತರಿದ್ದರು.
ಅನಿತಾ ಗೋಳಿಯಡ್ಕ ಪ್ರಾರ್ಥಿಸಿದರು. ಅನಿತಾ ಕಂಜಿಪಿಲಿ ಸ್ವಾಗತಿಸಿ, ಜಯಲಕ್ಷ್ಮಿ ಕುದ್ಕುಳಿ ವಂದಿಸಿ, ಚಿತ್ರಾವತಿ ಹಲ್ದಡ್ಕ ಕಾರ್ಯಕ್ರಮವನ್ನು ನಿರೂಪಿಸಿದರು.