ಸಂಪಾಜೆ -ಮಾರ್ಪಡ್ಕ- ಊರುಬೈಲು ಸೇತುವೆ ಕುಸಿತ

0
766

ಊರುಬೈಲಿನ 200ಕ್ಕೂ ಅಧಿಕ ಮನೆಗಳ ಸಂಪರ್ಕ ಕಡಿತ

p>

ನಿನ್ನೆಯಷ್ಟೇ ಸುದ್ದಿ ಅಪಾಯ ಎಚ್ಚರಿಸಿತ್ತು

ಸಂಪಾಜೆಯಿಂದ ಮಾರ್ಪಡ್ಕ ಮೂಲಕ ಊರುಬೈಲಿಗೆ ಸಂಪರ್ಕ ಕಲ್ಪಿಸುವ ಮಾರ್ಪಡ್ಕ ಸೇತುವೆಯು ನಿನ್ನೆ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಕುಸಿದಿದ್ದು, ಊರುಬೈಲಿನ ಸುಮಾರು ಇನ್ನೂರಕ್ಕೂ ಹೆಚ್ಚು ಮನೆಗಳ ಸಂಪರ್ಕ ಕಡಿತಗೊಂಡಿದೆ.

ಸಂಪಾಜೆಯಿಂದ ಮಾರ್ಪಡ್ಕ ದಾರಿಯಾಗಿ ಚೆಂಬು ಗ್ರಾಮದ ಊರುಬೈಲಿಗೆ ಸಂಪರ್ಕ ಕಲ್ಪಿಸುವ ಈ ಸೇತುವೆಯನ್ನು ಕಳೆದ ಮೂರು ವರ್ಷಗಳ ಹಿಂದಷ್ಟೇ ನಿರ್ಮಾಣ ಮಾಡಲಾಗಿತ್ತು. ಇಲ್ಲಿ ಸೇತುವೆ ನಿರ್ಮಾಣದ ವೇಳೆ ತಡೆಗೋಡೆಯೂ ನಿರ್ಮಾಣಗೊಂಡಿಲ್ಲ ಹಾಗೂ ಸೇತುವೆಯನ್ನು ಅತ್ಯಂತ ಕಳಪೆ ಕಾಮಗಾರಿಯಿಂದ ನಿರ್ಮಿಸಿರುವುದೇ ಸೇತುವೆ ಕುಸಿಯಲು ಕಾರಣ ಎಂದು ಸ್ಥಳೀಯರು ಹೇಳುತ್ತಿದ್ದಾರೆ.


ಸೇತುವೆ ಅಪಾಯ ಕುರಿತು ಸುದ್ದಿಯಲ್ಲಿ ವರದಿ ಪ್ರಸಾರ

ಸೇತುವೆಯ ಎರಡೂ ಬದಿಗಳಲ್ಲಿ ಭಾರೀ ಪ್ರಮಾಣದಲ್ಲಿ ಬಿರುಕು ಬಿಟ್ಟಿದ್ದರಿಂದ ಸೇತುವೆ ಅಪಾಯದಲ್ಲಿರುವ ಕುರಿತಂತೆ ಸುದ್ದಿ ಚಾನೆಲ್ ಹಾಗೂ ವೆಬ್ ಸೈಟ್ ನಲ್ಲಿ ನಿನ್ನೆಯಷ್ಟೇ ವರದಿ ಪ್ರಸಾರಗೊಂಡಿತ್ತು.

LEAVE A REPLY

Please enter your comment!
Please enter your name here