ನಾಲ್ಕೂರು : ಚಿಲ್ತಡ್ಕ ದೈವಸ್ಥಾನದ ಮಾಡರ ಮನೆ ಬಳಿ ಆವರಣ ಗೋಡೆ ಕುಸಿತ

0
220

p>

ನಾಲ್ಕೂರು ಗ್ರಾಮದ ಗ್ರಾಮ ದೇವವಾದ ಚಿಲ್ತಡ್ಕ ಶ್ರೀ ಉಳ್ಳಾಕುಲು ಕುಮಾರ ದೈವಗಳ ದೈವಸ್ಥಾನದಲ್ಲಿ ನಿರ್ಮಿಸಿದ ಆವರಣ ಗೋಡೆಯು ನೆನ್ನೆ ಸುರಿದ ಭಾರೀ ಮಳೆಗೆ ಹೊಳೆ ತುಂಬಿ ಹರಿದಾಗ ಕುಸಿದು ಬಿದ್ದಿದೆ. ಇಲ್ಲಿ ಪಕ್ಕದಲ್ಲಿ ಹರಿಯುತ್ತಿರುವ ಹೊಳೆಗೆ ತಡೆಗೋಡೆ ನಿರ್ಮಿಸಿ ಕೊಡುವಂತೆ ದೈವಸ್ಥಾನದ ಆಡಳಿತ ಮಂಡಳಿಯವರು ಸಂಬಂಧಪಟ್ಟವರಿಗೆ ಮನವಿ ಮಾಡಿಕೊಂಡಿದ್ದರು. ಸಂಬಂಧಪಟ್ಟ ಇಲಾಖೆಯಲ್ಲಿ ಮನವಿಗಳು ವಿನಿಮಯವಾಗಿದೆಯೇ ಹೊರತು ಅನುದಾನ ಬಿಡುಗಡೆಗೊಂಡಿಲ್ಲ. ಇದೀಗ ದೈವಸ್ಥಾನದ ಆವರಣ ಗೋಡೆ ಕುಸಿದು ಬಿದ್ದುದ್ದರಿಂದ ಸುಮಾರು ಮೂರರಿಂದ ನಾಲ್ಕು ಲಕ್ಷದವರೆಗೆ ಹಾನಿಯಾಗಿದೆ.


ಸ್ಥಳಕ್ಕೆ ಗ್ರಾಮ ಪಂಚಾಯತ್ ಗುತ್ತಿಗಾರು ಇಲ್ಲಿನ ಅಭಿವೃದ್ಧಿ ಅಧಿಕಾರಿಗಳು, ನಾಲ್ಕೂರು ಗ್ರಾಮ ಲೆಕ್ಕಾಧಿಕಾರಿ,. ಸ್ಥಳೀಯ ಪಂಚಾಯತ್ ಸದಸ್ಯರುಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಪಕ್ಕದಲ್ಲಿ ಇರುವ ಕೃಷಿಕರ ತೋಟಕ್ಕೂ ನೀರು ನುಗ್ಗಿದೆ. ಅಲ್ಲದೆ ಸಂಪರ್ಕ ಸೇತುವೆಗೂ ಹಾನಿಯಾಗಿದೆ. (ವರದಿ.ಡಿ.ಹೆಚ್.)

 

LEAVE A REPLY

Please enter your comment!
Please enter your name here