ಐವರ್ನಾಡು ಸಹಕಾರಿ ಸಂಘಕ್ಕೆ ಸಾಧನಾ ಪ್ರಶಸ್ತಿ – ಸನ್ಮಾನ

0
273

 

p>

ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಸಾಧನಾ ಪ್ರಶಸ್ತಿ ಬಂದಿರುತ್ತದೆ.
2021-22 ನೇ ಸಾಲಿನಲ್ಲಿ ಶೇ 100 ಸಾಲ ವಸೂಲಾತಿಗಾಗಿ ದ.ಕ.ಜಿಲ್ಲಾ ಕೇಂದ್ರ ಬ್ಯಾಂಕಿನಿಂದ ಪ್ರಶಸ್ತಿ ಸ್ವೀಕರಿಸಲಾಯಿತು.
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಅವರು ಆ.05 ರಂದು ಮಂಗಳೂರಿನಲ್ಲಿ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿ ರವಿಪ್ರಸಾದ್ ಸಿ.ಕೆ.ಯವರನ್ನು ಶಾಲು ,ಹೊದಿಸಿ, ಫಲ ಪುಷ್ಪ ಸ್ಮರಣಿಕೆ, ಸಾಧನಾ ಪ್ರಶಸ್ತಿ ನೀಡಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಡಿ.ಸಿ.ಸಿ.ಬ್ಯಾಂಕಿನ ನಿರ್ದೇಶಕರು, ಐವರ್ನಾಡು ಪ್ರಾ.ಕೃ.ಪ.ಸಹಕಾರಿ ಸಂಘದ ನಿರ್ದೇಶಕರಾದ ಕುಸುಮಾಧರ ಮಡ್ತಿಲ, ಸತೀಶ ಎಡಮಲೆ, ಪುರಂದರ ನಾಯ್ಕ, ಮಹೇಶ್ ಜಬಳೆ,ವಾಸುದೇವ ನಿಡುಬೆ, ಚಂದ್ರಶೇಖರ,ಕೃಷ್ಣ ಬೆಳ್ಚಪ್ಪಾಡ, ದೇವಕಿ ಸಿ.ಜಿ, ಭವಾನಿ ಎಂ.ಸಿ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here