ರಹೀಮ್ ಪೇರಡ್ಕರವರಿಂದ ಪೇರಡ್ಕ ಜುಮಾ ಮಸೀದಿ ಕಾಮಗಾರಿಗೆ ರೂ. 2 ಲಕ್ಷ ದೇಣಿಗೆ

0

 

ಪೇರಡ್ಕ ಮುಹಿದ್ದಿನ್ ಜುಮ್ಮಾ ಮಸೀದಿಯಲ್ಲಿ ನಡೆಯುತ್ತಿರುವ ಅಭಿವ್ರದ್ದಿ ಕಾಮಗಾರಿಗೆ ಅನಿವಾಸಿ ಭಾರತೀಯ ಉದ್ಯಮಿ ಪೇರಡ್ಕ ನಿವಾಸಿ ಆಗಿರುವ ರಹೀಂ ಪೇರಡ್ಕ ರವರು ರೂಪಾಯಿ ೨ ಲಕ್ಷ ದೇಣಿಗೆಯನ್ನು ಆಗಸ್ಟ್ ೫ ಶುಕ್ರವಾರ ಜುಮಾ ನಮಾಜಿನ ನಂತರ ಖತೀಬರಾದ ರಿಯಾಝ್ ಫೈಝಿ ಎಮ್ಮೆಮಾಡು ರವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿಯವರ ಪರವಾಗಿ ರಹೀಂ ಪೇರಡ್ಕರವರಿಗೆ ಸ್ಥಳೀಯ ಖತೀಬರಾದ ರಿಯಾಝ್ ಫೈಝಿ ಹಾಗೂ ಹಿರಿಯರಾದ ಅಬ್ಬಾಸ್ ಪಾಂಡಿಯವರು ಶಾಲು ಹೊದಿಸಿ ಸನ್ಮಾನಿಸಿದರು, ಮುಹಿಯದ್ದೀನ್ ಜುಮ್ಮಾ ಮಸೀದಿಯ ಗೌರವಾಧ್ಯಕ್ಷ ಟಿ.ಎಂ.ಶಾಹೀದ್ ತೆಕ್ಕಿಲ್ ಮಾತನಾಡಿ ರಹೀಂ ರವರ ತಂದೆಯವರು ಪೇರಡ್ಕ ಮಸೀದಿಯಲ್ಲಿ ಸುದೀರ್ಘ ವರ್ಷಗಳ ಕಾಲ ಕಾರ್ಯದರ್ಶಿ ಎಂ ಆರ್ ಡಿ ಎ ಅಧ್ಯಕ್ಷರಾಗಿ ಮಸೀದಿಯ ಕಾರ್ಯದರ್ಶಿಯಾಗಿ ಮಸೀದಿಯ ಎಲ್ಲಾ ಅಭಿವ್ರದ್ಧಿಯಲ್ಲಿ ತನ್ನನು ತಾನು ಸಂಪೂರ್ಣ ತೊಡಗಿಸಿಕೊಂಡವರಾಗಿದ್ದರು.

ತೆಕ್ಕಿಲ್ ಮೊಹಮ್ಮದ್ ಹಾಜಿಯವರ ಹಿರಿಯ ಮಗಳಾದ ದಿವಂಗತ ಕುಂಞಮಿನ ಅವರ ಹಿರಿಯ ಪುತ್ರರಾದ ದಿವಂಗತ ಮೊಹಮದ್ ಕುಂಞ ಪೇರಡ್ಕ ಅವರ ಸೇವೆ ಸ್ಮರಣೀಯ ನಾನು ಅವರ ಜೊತೆ ಕಾರ್ಯದರ್ಶಿಯಾಗಿ ದುಡಿದದನ್ನು ಸ್ಮರಿಸಿ ಅವರ ಪುತ್ರ ರಹೀಂ ಪೇರಡ್ಕ ಅವರು ಈ ಕೊಡುಗೆ ಶ್ಲಾಘನೀಯ ಅಲ್ಲದೆ ಇಲ್ಲಿನ ಯುವಕರು ಒಳ್ಳೆಯ ಸಮಾಜಮುಖಿ ಕೆಲಸಗಳನ್ನು ಮಾಡುತಿದ್ದಾರೆ ಇತ್ತೀಚೆಗೆ ಬಂದ ನೆರೆಯ ಸಂದರ್ಭದಲ್ಲಿ ರಾತ್ರಿ ಹಗಲೆನ್ನದೆ ರಕ್ಷಣಾಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ, ನಿಮ್ಮ ಉತ್ತಮ ಕೆಲಸಗಳಿಗೆ ನನ್ನ ಸಹಕಾರ ಸದಾ ಇರುತ್ತದೆ ಎಂದರು. ಖತೀಬ್ ರಿಯಾಝ್ ಫೈಝಿ ಎಮ್ಮೇಮಾಡು ಅವರು ರಹೀಂ ಪೇರಡ್ಕ ಅವರ ತಂದೆ ಯವರಿಗೆ ಮತ್ತು ಕುಟುಂಬದವರಿಗೆ ವಿಶೇಷ ಪ್ರಾರ್ಥನೆ ಯೊಂದಿಗೆ ಊರಿನ ಸರ್ವರಿಗೆ ಒಳಿತನ್ನು ಬಯಸಿ ಸಂಕಷ್ಟ ಕಾಲದಲ್ಲಿ ಎಲ್ಲರೂ ಪರಸ್ಪರ ಸಹಕರಿಸುವಂತೆ ಈ ಊರಿನ ಆಸುಪಾಸಿನ ಯುವಕರು ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಮಾಡಿದ ಸೇವೆಯನ್ನು ಸ್ಮರಿಸಿ ಈ ಊರಿನ ಜನರು ಉದ್ಯೋಗ ನಿಮಿತ್ತ ಹೊರ ಊರಿನಲ್ಲಿ ಹಾಗೂ ದೇಶದಲ್ಲಿ ಇರುವ ಪ್ರತಿಯೊಬ್ಬರಿಗೂ ವಿಶೇಷ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಜಮಾಅತ್ ಕಾರ್ಯದರ್ಶಿ ಟಿ.ಎಂ. ಅಬ್ದುಲ್ ರಝಾಕ್ ಹಾಜಿ ತೆಕ್ಕಿಲ್ ಕೋಶಾಧಿಕಾರಿ ಪಿ.ಕೆ ಉಮ್ಮರ್ ಗೂನಡ್ಕ, ಮೊಹಮ್ಮದ್ ಕುಂಞ ತೆಕ್ಕಿಲ್ ಪೇರಡ್ಕ, ಮೊಯಿದು ದರ್ಖಾಸ್, ಹನೀಫ್ ಮೊಟ್ಟಂಗಾರ್, ಅಶ್ರಫ್ ತೆಕ್ಕಿಲ್ ಪೇರಡ್ಕ, ಇಭ್ರಾಹಿಂ ಸೆಟ್ಯಡ್ಕ, ಟಿ ಬಿ ಅಬ್ದುಲ್ಲ ತೆಕ್ಕಿಲ್ ಮೊದಲಾದವರಿದ್ದರು. ಸನ್ಮಾನಕ್ಕೆ ಉತ್ತರಿಸಿದ ರಹೀಂ ಪೇರಡ್ಕ ಅವರು ಗಲ್ಫ್ ಸಮಿತಿಯನ್ನು ಹೆಚ್ಚು ಕ್ರಿಯಾಶೀಲರಾಗಿ ಸಂಘಟಿಸಲು ವಿನಂತಿಸಿ ಮುಂದೆ ಕೂಡ ಹೆಚ್ಚಿನ ಸಹಕಾರದ ಭರವಸೆ ನೀಡಿದರು.