ಕಲ್ಲುಗುಂಡಿ: ವಿದ್ಯುತ್ ಆಕಸ್ಮಿಕ ಘಟನೆಯಲ್ಲಿ ಅಂಗಡಿ ಕಟ್ಟಡವನ್ನು ಕಳೆದುಕೊಂಡವರಿಗೆ ಸಹಾಯಧನ

0

ಸಂಪಾಜೆ ಗ್ರಾಮದ ಕಲ್ಲುಗುಂಡಿಯಲ್ಲಿ ವಿದ್ಯುತ್ ಆಕಸ್ಮಿಕ ಘಟನೆಯಲ್ಲಿ ಅಂಗಡಿ ಕಟ್ಟಡವನ್ನು ಕಳಕೊಂಡ ಮಹಮ್ಮದ್ ಕುಂಞ, ಟೈರ್ ಅಂಗಡಿಯ ಲಿಗೋರಿ ಡಿ ಸೋಜಾ, ಹೊಟೇಲ್ ನ ಆನಂದ ರವರಿಗೆ ಸಾರ್ವಜನಿಕ ಸಹಕಾರದೊಂದಿಗೆ ಸಂಗ್ರಹಿಸಿದ ಹಣವನ್ನು ತುರ್ತು ಪರಿಹಾರದ ಸಹಾಯಧನವಾಗಿ ನೀಡಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ ಹಮೀದ್ ಗೂನಡ್ಕ, ತೆಕ್ಕಿಲ್ ಪ್ರತಿಷ್ಠಾನದ ಟಿ ಎಂ ಶಾಹಿದ್ ತೆಕ್ಕಿಲ್ ಸದಸ್ಯರುಗಳಾದ ಅಬೂಸಾಲಿ ಗೂನಡ್ಕ ಎಸ್. ಕೆ. ಹನೀಫ್ ಸಂಪಾಜೆ, ತಾಜ್ ಮಹಮ್ಮದ್, ಅಶ್ರಫ್ ಕೆ. ಎಮ್. ಹಸೈನಾರ್ ಎ. ಕೆ. ಅಪ್ಪುಕುಞ, ರಝಕ್ ಸೂಪರ್, ರಫೀಕ್ ಪ್ರಗತಿ, ಹನೀಫ್ ಕಡೆಪಾಲ ವಲೇರಿಯನ್ ಡಿಸೋಜಾ, ಪ್ರವೀಣ್ ರೋಯಲ್ ಕ್ರಾಸ್ತಾ, ರೋಡಲ್ಪ್ ಕ್ರಾಸ್ತಾ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here