ಹರಿಹರದಲ್ಲಿ ಬೆಳ್ತಂಗಡಿ ಮತ್ತು ಸುಳ್ಯ ವಿಪತ್ತು ನಿರ್ವಹಣಾ ಘಟಕಗಳು

0

ಬದುಕು ಕಟ್ಟಲು ತಂಡೋಪತಂಡ ಜನ

ಹರಿಹರದಲ್ಲಿ ನಡೆದ ವಿಪತ್ತಿಗೆ ಬೆಳ್ತಂಗಡಿ ಮತ್ತು ಸುಳ್ಯ ವಿಪತ್ತು ನಿರ್ವಹಣಾ ಘಟಕಗಳು ಇಂದು ಭಾಗಿಯಾಗಿದ್ದು ಬದುಕು ಕಟ್ಟಲು ತಂಡೋಪತಂಡ ಜನ ಆಗಮಿಸಿ ಕೆಲಸದಲ್ಲಿ ಕೈ ಜೋಡಿಸಿದ್ದಾರೆ.

ಯೋಜನೆಯ ಜಿಲ್ಲಾ ನಿರ್ದೇಶಕ ಪ್ರವೀಣ್, ಜನಜಾಗೃತಿಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿಂಟ್‌ಸ್ಸ ಪಾಯಸ್, ಯೋಜನಾಧಿಕಾರಿ ನಾಗೇಶ್,ಹರಿಹರೇಶ್ವರ ದೇವಸ್ಥಾನ ದ ವ್ಯವಸ್ಥಾಪನ ಸಮಿತಿಯ ಅದ್ಯಕ್ಷ ಕಿಶೋರ್ ಕೂಜುಗೋಡು,ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ದ.ಕ ಪ್ರಾದೇಶಿಕ ವಿಭಾಗದ ಯೋಜನ ಅದಿಕಾರಿ ತಿಮ್ಮಯ್ಯ ನಾಯ್ಕ, ಪಿಡಿಒ ಮಣಿಯಾನ ಪುರುಷೋತ್ತಮ, ವಲಯ ಕೃಷಿ ಅದಿಕಾರಿ ರಮೇಶ್, ವಿಪತ್ತು ಯೋಜನೆ ಅಧಿಕಾರಿ ಜಯಂತ ಪಟದಾರ್ ಬೆಳ್ತಂಗಡಿ ಹಾಗು ಸುಳ್ಯ ತಾಲೂಕಿನ ವಿಪತ್ತು ನಿರ್ವಹಣಾ ಸದಸ್ಯರು, ಹಾಗು ಐನೆಕಿದು,ಹರಿಹರ, ಬಾಳುಗೋಡು ಒಕ್ಕೂಟದ ಸದಸ್ಯರು ಕಾರ್ಯ ಆರಂಭಿಸಿದ್ದಾರೆ.

LEAVE A REPLY

Please enter your comment!
Please enter your name here