ತುಮಕೂರು ಯುನಿವರ್ಸಿಟಿ ಪ್ರಭಾರ ಕುಲಪತಿ ಡಾ। ಕೇಶವರಿಗೆ ಗ್ರಂಥಾಲಯ ಸೇವಾ ಪುರಸ್ಕಾರ

0
114

 

2022ನೇ ಸಾಲಿನಲ್ಲಿ ಗ್ರಂಥಪಾಲಕರ ದಿನಾಚರಣೆ ಪ್ರಯುಕ್ತ ನೀಡುವ “ಉತ್ತಮ ಗ್ರಂಥಪಾಲಕ” ಪುರಸ್ಕಾರಕ್ಕೆ ತುಮಕೂರು ಯುನಿವರ್ಸಿಟಿ ಪ್ರಭಾರ ಕುಲಪತಿ ಡಾ। ಕೇಶವರವರು ಆಯ್ಕೆಯಾಗಿದ್ದಾರೆ.


ಪ್ರಸ್ತುತ 2022ನೇ ಸಾಲಿನವರೆಗೆ ಗ್ರಂಥಾಲಯ ವಿಜ್ಞಾನ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ಸೇವೆ ಮತ್ತು ಸಾಧನೆಗಳನ್ನು ಗಮನಿಸಿ, ನಿರ್ದೇಶಕರು, ಸಾರ್ವಜನಿಕ ಗ್ರಂಥಾಲಯ ಇಲಾಖೆ, ಬೆಂಗಳೂರು ಇವರ ಅಧ್ಯಕ್ಷತೆಯ ಉಪ ಸಮಿತಿಯು ಮಾಡಿದ ಶಿಫಾರಸ್ಸಿನನ್ವಯ 2022 ನೇ ಸಾಲಿನ ಗ್ರಂಥಾಲಯ ಸೇವಾ ಪುರಸ್ಕಾರಕ್ಕೆ ‘ಉಲ್ಲೇಖ 2 ರಂತೆ ಸರ್ಕಾರವು ಆಯ್ಕೆ ಮಾಡಿದೆ ಎಂದು ಇಲಾಖಾ ಪ್ರಕಟಣೆ ತಿಳಿಸಿದೆ.

ಆ 12 ರಂದು ಬೆಳಗ್ಗೆ 10.00 ಗಂಟೆಗೆ ಗ್ರಂಥಾಂಗಣ ನಗರ ಕೇಂದ್ರ ಗ್ರಂಥಾಲಯ ಪಶ್ಚಿಮ ವಲಯ ಹಂಪಿನಗರ ಬೆಂಗಳೂರು ಇಲ್ಲಿ ನಡೆದ ರಾಜ್ಯ ಮಟ್ಟದ ‘ಗ್ರಂಥಪಾಲಕರ ದಿನಾಚರಣೆ’ಯ
ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನಿಸಲಾಯಿತು.
ಡಾ। ಕೇಶವರವರು ಸುಳ್ಯದ ಜಟ್ಟಿಪಳ್ಳದವರು.

LEAVE A REPLY

Please enter your comment!
Please enter your name here