ಗಾಂಧಿನಗರ ತರ್ಬಿಯತುಲ್ ಇಸ್ಲಾಂ ಜಮಾಅತ್ ಕಮಿಟಿ ವತಿಯಿಂದ ಸಂಭ್ರಮೋಲ್ಲಾಸದ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ

0

 

ಸಹನೆ ತಾಳ್ಮೆಯಿಂದ ಸ್ವಾತಂತ್ರ್ಯದ ಸೌಂದರ್ಯ ವೃದ್ಧಿ : ಆಶ್ರಪ್ ಖಾಮಿಲ್ ಸಖಾಫಿ

ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತ ಎಪ್ಪತ್ತೈದು ವರ್ಷಗಳ ಸ್ವತಂತ್ರ್ಯದ ಅಮೃತೋತ್ಸವ ಸಂಭ್ರಮದಲ್ಲಿದೆ.
ದಶಕಗಳ ಹಿಂದೆ ಹಿರಿಯರು ಮಾಡಿದ ತ್ಯಾಗ ಬಲಿದಾನ ದಿಂದ ತಂದು ಕೊಟ್ಟ ಸ್ವಾತಂತ್ರ್ಯದ
ಯಶಸ್ಸು ನೂರಾರು ವರ್ಷ ಈ ದೇಶದಲ್ಲಿ ಉಳಿಯಬೇಕು. ಸಹನೆ ತಾಳ್ಮೆ ಮತ್ತು ಸಹೋದರತೆ ಸಾಮರಸ್ಯದ ಬದುಕನ್ನು ರೂಪಿಸಲು ದೇಶದ ಪ್ರತಿಯೊಬ್ಬ ಪ್ರಜೆಯು ಸಮರ್ಪಣಾ ಭಾವದಿಂದ ಕೈ ಜೋಡಿಸುವಂತಗಬೇಕು ಎಂದುಗಾಂಧಿನಗರ ಜುಮ್ಮಾ ಮಸೀದಿ ಖತೀಬರಾದ ಅಶ್ರಫ್ ಕಾಮಿಲ್ ಸಖಾಪಿ ಹೇಳಿದರು.

ಗಾಂಧಿನಗರ ಮುನವ್ವಿರುಲ್ ಇಸ್ಲಾಂ ಮದರಸ ಅಂಗನದಲ್ಲಿ ಸ್ವತಂತ್ರೋತ್ಸವದ ಸಂದೇಶ ನೀಡಿ ಅವರು ಮಾತನಾಡುತ್ತಿದ್ದರು.
ಗಾಂಧಿನಗರ ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಕೆ ಎಂ ಮುಸ್ತಾಫ ಧ್ವಜಾರೋಹಣ ನೆರವೇರಿಸಿದರು. ಮುದರ್ರಿಸ್ ಶರಫುದ್ದಿನ್ ಸಅದಿ ದುವಾ ಪ್ರಾರ್ಥನೆಗೈದರು

ಈ ಸಂದರ್ಭದಲ್ಲಿ ಎಂಜೆಎಂ ಪದಾಧಿಕಾರಿಗಳಾದ ಹಾಜಿ ಕೆ.ಎಂ. ಎಸ್ ಮಹಮ್ಮದ್ ಕೋಶಾಧಿಕಾರಿ ಮುಹಿಯುದ್ದಿನ್ ಫಾನ್ಸಿ, ಕಾರ್ಯದರ್ಶಿ ಕೆಬಿ ಅಬ್ದುಲ್ ಮಜೀದ್,ನಿರ್ದೇಶಕರುಗಳಾದ
ಕೆ ಎಸ್ ಉಮ್ಮರ್ ಹಾಜಿ ಎಸ್ ಎ ಹಮೀದ್,ಅಬ್ದುಲ್ ಹಮೀದ್ ಬೀಜಕೊಚ್ಚಿ,ಅಬ್ದುಲ್ ಖಾದರ್ ಆಜಾದ್, ಹಾಜಿ ಇಸ್ಮಾಯಿಲ್, ಇಬ್ರಾಹಿಂ ಶಿಲ್ಪಾ ಅನ್ಸಾರಿಯ ಅಧ್ಯಕ್ಷ ಅಬ್ದುಲ್ ಮಜೀದ್ ಜನತಾ, ಅನ್ಸಾರ್ ಅಧ್ಯಕ್ಷ ಹಾಜಿ ಅಬ್ದುಲ್ ಶುಕೂರ್ ಮೊದಲಾದವರು ಉಪಸ್ಥಿತರಿದ್ದರು. ಮದರಸ ಮುಖ್ಯಗುರುಗಳಾದ ಸದರ್ ಉಸ್ತಾದ್ ಇಬ್ರಾಹಿಂ ಸಖಾಫಿ ಪುಂಡೂರು ಸ್ವಾಗತಿಸಿ, ಶಿಕ್ಷಕ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ವಂದಿಸಿದರು ಸಹಾಯಕ ಸದರ್ ಅಬ್ದುಲ್ ಖಾದರ್ ಮುಸ್ಲಿಯಾರ್, ಮುಅಝ್ನ್ ರಾವೂಫ್ ಜೂಹರಿ ನಿರೂಪಿಸಿದರು ಅಮೃತಮಹೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಮದರಸಾ ವಿದ್ಯಾರ್ಥಿಗಳಿಂದ ಸುಶ್ರಾವ್ಯವಾದ ದೇಶಭಕ್ತಿ ಗೀತೆ ಸೌಹಾರ್ದ ಗೀತೆ ರಾಷ್ಟ್ರಗೀತೆ ಸುಂದರವಾಗಿ ಮೂಡಿ ಬಂತು.

LEAVE A REPLY

Please enter your comment!
Please enter your name here