ಸುಬ್ರಹ್ಮಣ್ಯದ ಪರ್ವತಮುಖಿ ಅಂಗನವಾಡಿ ಕೇಂದ್ರದಲ್ಲಿ 75ನೇ ಸ್ವಾತಂತ್ರ್ಯೋತ್ಸವ

0

 

 

ಸುಬ್ರಹ್ಮಣ್ಯದ ಪರ್ವತಮುಖಿ ಅಂಗನವಾಡಿ ಕೇಂದ್ರದಲ್ಲಿ 75ನೇ ಸ್ವಾತಂತ್ರ್ಯೋತ್ಸವ ಆ. 15ರಂದು ಆಚರಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಲಯನ್ಸ್ ಕ್ಲಬ್ ಸುಬ್ರಹ್ಮಣ್ಯ ಇದರ ವತಿಯಿಂದ ದಿ. ಕುಕ್ಕಣ್ಣ ರೈ ಹಾಗೂ ದಿ. ಶ್ರೀಮತಿ ಸೀತಮ್ಮ ರೈಯವರ ಸ್ಮರಣಾರ್ಥ ಮೋಹನ್ ದಾಸ್ ರೈ ದೋಣಿಮಕ್ಕಿಯವರು ಕೊಡುಗೆಯಾಗಿ ನೀಡಿದ ನೂತನ ಧ್ವಜ ಸ್ತಂಭ ಉದ್ಘಾಟನೆ ನೆರವೇರಿಸಲಾಯಿತು. ಧ್ವಜ ಸ್ಥಂಭದ ಉದ್ಘಾಟನೆಯನ್ನು ಲಯನ್ಸ್ ಕ್ಲಬ್‌ನ ಅಧ್ಯಕ್ಷರಾದ ರಂಗಯ್ಯ ಶೆಟ್ಟಿಗಾರ್ ಉದ್ಘಾಟನೆ ಮಾಡಿ ಧ್ವಜಾರೋಹಣ ಮಾಡಿದರು. ಡಾ. ಶಿವಕುಮಾರ್ ಹೋಸೋಲಿಕೆಯವರು ಸ್ವಾತಂತ್ರ್ಯೋತ್ಸವದ ಬಗ್ಗೆ ಮಾತಾಡಿದರು. ಲಯನ್ಸ್ ಅಧ್ಯಕ್ಷರಾದ ರಂಗಯ್ಯ ಶೆಟ್ಟಿಗಾರ್ ಮತ್ತು ಉದ್ಯಮಿ ಡಾ. ರವಿ ಕಕ್ಕೆಪದವು ಇವರನ್ನು ಗೌರವಿಸಲಾಯಿತು. ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಸುಗುಣ ವಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಣೆ ಮಾಡಿ ವಂದಿಸಿದರು. ಪೋಷಕರು, ಅಂಗನವಾಡಿ ಪುಟಾಣಿಗಳು ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.