ಅನಾರೋಗ್ಯ ಪೀಡಿತ ಉದಯ ಕುಮಾರ್ ರವರ ಮನೆಗೆ ಆರೋಗ್ಯ ಸಹಾಯಕಿಯರ ತಂಡ ಭೇಟಿ

0
396

 

ಕ್ಯಾನ್ಸರ್ ಪೀಡಿತರಾದ ಮರ್ಕಂಜದ ಹಲ್ದಡ್ಕ ಉದಯಕುಮಾರ್ ರವರ ಮನೆಗೆ ಆರೋಗ್ಯ ಸಹಾಯಕಿಯರ ತಂಡ ಭೇಟಿ ನೀಡಿದ್ದಾರೆ. ಸುದ್ದಿ ವೆಬ್ ಸೈಟ್ ಹಾಗೂ ಸುದ್ದಿ ಚಾನೆಲ್‌ನಲ್ಲಿ ಇಂದು ವರದಿ ಬಂದ ತಕ್ಷಣ ಆರೋಗ್ಯ ಸಹಾಯಕಿ ವೈಭವ್, ಅಂಗನವಾಡಿ ಕಾರ್ಯಕರ್ತೆ ಜಲಜಾಕ್ಷಿ, ಆಶಾ ಕಾರ್ಯಕರ್ತೆ ಸೀಮಾರವರು ಮನೆಗೆ ಭೇಟಿ ನೀಡಿದ್ದಾರೆ.

ಅವರು ಸುಳ್ಯ ಸರಕಾರಿ ಆಸ್ಪತ್ರೆಯ ಮೂಲಕ ಮಂಗಳೂರಿನ ಆಸ್ಪತ್ರೆಗೆ ದಾಖಲಾಗುವಂತೆ ಮನೆಯವರಿಗೆ ಹೇಳಿದ್ದಾರೆ. ಹೀಗಾಗಿ ಶೌರ್ಯ ವಿಪತ್ತು ನಿರ್ವಹಣಾ ಘಟಕದವರು ಸುಳ್ಯಕ್ಕೆ ಕರೆದೊಯ್ಯುವ ಕೆಲಸ ಮಾಡಲಿದ್ದಾರೆ ಎಂದು ದೊಡ್ಡತೋಟ ವಲಯ ಸಂಯೋಜಕ ವೆಂಕಟೇಶ್ ಡಿ.ಜಿ. ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here