ಬ್ಲೆಸ್ಡ್ ಕುರಿಯಾಕೋಸ್ ಪ್ರೌಢ ಶಾಲೆಯಲ್ಲಿ ಖೋ – ಖೋ ಪಂದ್ಯಾಟ ಐವರ್ನಾಡು ಶಾಲೆ ಪ್ರಥಮ, ಪಂಜ ಶಾಲೆ ದ್ವಿತೀಯ

0

p>

ಬ್ಲೆಸ್ಡ್ ಕುರಿಯಾಕೋಸ್ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯಲ್ಲಿ ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ಖೋ – ಖೋ ಪಂದ್ಯಾಟ ಆ. 20 ರಂದು ನಡೆಯಿತು.
ಉದ್ಘಾಟನಾ ಕಾರ್ಯಕ್ರಮದ
ವೇದಿಕೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಟೀಸಾ ಜೋನ್ , ದೈಹಿಕ ಶಿಕ್ಷಣ ಪರಿವೀಕ್ಷಕರಾದ ಶ ಸೂಫಿ ಪೆರಾಜೆ , ಗುತ್ತಿಗಾರು ಗ್ರಾಮ ಪಂಚಾಯತ್ ಸದಸ್ಯರಾದ ಜಗದೀಶ ಬಾಕಿಲ, ಶಾಲಾ ಸಂಚಾಲಕಿ ಸಿಸ್ಟರ್‌ ಪಾವನ ಉಪಸ್ಥಿತರಿದ್ದರು . ಕುಮಾರಿ ವೀಕ್ಷಾಳ ಪ್ರಾರ್ಥಸಿದರು. ಶಾಲಾ ಸಹಶಿಕ್ಷಕಿ ಕುಮಾರಿ ಕವಿತಾ ಸ್ವಾಗತಿಸಿದರು. ಪಂದ್ಯಾಟದಲ್ಲಿ 11 ತಂಡಗಳು ಭಾಗವಹಿಸಿದ್ದ . ತೀರ್ಪುಗಾರರಾಗಿ ತಾಲೂಕಿನ ಶಾಲೆಗಳ ದೈಹಿಕ ಶಿಕ್ಷಕರು ಸಹಕರಿಸಿದರು . ಬಾಲಕರ ವಿಭಾಗದಲ್ಲಿ ಐವರ್ನಾಡು ಸರಕಾರಿ ಹಿ.ಪ್ರಾ ಶಾಲೆ ವಿದ್ಯಾರ್ಥಿಗಳು ಪ್ರಥಮ ಸ್ಥಾನವನ್ನು , ಸರಕಾರಿ ಮಾದರಿ ಹಿ.ಪ್ರಾ ಶಾಲೆ ಪಂಜ ದ್ವಿತೀಯ ಸ್ಥಾನವನ್ನು ಗಳಿಸಿದರು .

ಬಾಲಕಿಯರ ವಿಭಾಗದಲ್ಲಿ ಸ.ಹಿ.ಪ್ರಾಶಾಲೆ ಐವರ್ನಾಡು ಪ್ರಥಮ , ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪಂಜ ದ್ವಿತೀಯ ಸ್ಥಾನವನ್ನು ಗಳಿಸಿಕೊಂಡರು . ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಶಾಲಾ ಮುಖ್ಯೋಪಾಧ್ಯಾಯಿನಿ ಟಿಸಾ ಜೋನ್‌ರವರು ಟ್ರೋಫಿ ಮತ್ತು ಪ್ರಶಸ್ತಿ ಪತ್ರ ನೀಡಿದರು , ಹಾಗೂ ವೈಯಕ್ತಿಕ ಚಾಂಪಿಯನ್‌ಶಿಪ್‌ ವಿತರಿಸಿದರು.ಸಹಕರಿಸಿದ ದೈಹಿಕ ಶಿಕ್ಷಕರುಗಳಿಗೆ ಸ್ಮರಣಿಕೆ ನೀಡಿಲಾಯಿತು . ಶಾಲಾ ದೈಹಿಕ ಶಿಕ್ಷಕರಾದ ರಮೇಶ್ ಕೆ ಎಲ್ಲರನ್ನೂ ವಂದಿಸಿದರು.

LEAVE A REPLY

Please enter your comment!
Please enter your name here