ಬಾಳಿಲ: ಲಾರಿ -ರಿಕ್ಷಾ ಡಿಕ್ಕಿ

0

 

ಪಾರಾರಿಯಾದ ಲಾರಿ ಇಂದ್ರಾಜೆಯಲ್ಲಿ ಪತ್ತೆ

 

ಲಾರಿ ಮತ್ತು ರಿಕ್ಷಾ ಡಿಕ್ಕಿ ಹೊಡೆದು ರಿಕ್ಷಾ ಜಖಂ ಗೊಂಡ ಘಟನೆ ಆ.25 ರಂದು ಬಾಳಿಲದಿಂದ ವರದಿಯಾಗಿದೆ.
ಬಾಳಿಲ ಕಡೆ ಬರುತ್ತಿದ್ದ ರಿಕ್ಷಾಕ್ಕೆ ಹೊನ್ನಡ್ಕ ಎಂಬಲ್ಲಿ ಮಹಾರಾಷ್ಟದ ಲಾರಿಯೊಂದು ಡಿಕ್ಕಿ ಹೊಡೆದು ರಿಕ್ಷಾ ಪಲ್ಟಿಯಾಗಿ ಚಾಲಕ ಹರೀಶ್ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

ಈ ವೇಳೆ ಲಾರಿ ನಿಲ್ಲಿಸದೆ ಅಲ್ಲಿಂದ ಪರಾರಿಯಾಗಿದ್ದು ಬಳಿಕ ಇಂದ್ರಾಜೆಯಲ್ಲಿ ಪತ್ತೆಯಾಗಿರುವುದು ತಿಳಿದಿದೆ.ರಿಕ್ಷಾ ಜಖಂ ಗೊಂಡಿದ್ದು ಪ್ರಕರಣ ನಾಳೆ ರಾಜಿಯಲ್ಲಿ ಮುಗಿಸುವ ಸಾಧ್ಯತೆ ಇರುವುದಾಗಿ ತಿಳಿದು ಬಂದಿದೆ.