ದೇವಚಳ್ಳ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆಗೆ ಅವಳಿ ಸಮಗ್ರ ದ್ವಿತೀಯ ಪ್ರಶಸ್ತಿ

0

 

ಆಮರಪಡ್ನೂರು ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ದೇವಚಳ್ಳ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆಯು ಕಿರಿಯ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಎರಡೂ ವಿಭಾಗದಲ್ಲೂ ಸಮಗ್ರ ದ್ವಿತೀಯ ಪ್ರಶಸ್ತಿಗಳನ್ನು ಪಡೆದು, ಆರು ವಿದ್ಯಾರ್ಥಿಗಳು ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಕಿರಿಯ ವಿಭಾಗದಲ್ಲಿ ಆಶುಭಾಷಣ – ದಿಗಂತ್. ಡಿ. – ಪ್ರಥಮ, ಲಘು ಸಂಗೀತ – ಪೂರ್ವಿ ಅಂಬೆಕಲ್ಲು ಪ್ರಥಮ, ಇಂಗ್ಲೀಷ್ ಕಂಠಪಾಠ – ಶರ್ವಾಣಿ ಯು. – ಪ್ರಥಮ, ಚಿತ್ರಕಲೆ – ವಿಹಾನಿ. ಜೆ. ಎ. ದ್ವಿತೀಯ.
ಹಿರಿಯ ವಿಭಾಗ – ಆಶುಭಾಷಣ – ಸಾನ್ವಿ. ಪಿ. ವಿ. – ಪ್ರಥಮ, ಚಿತ್ರಕಲೆ – ಅಕ್ಷಯ್. ಆರ್. ಎಚ್. – ಪ್ರಥಮ, ಇಂಗ್ಲೀಷ್ ಕಂಠಪಾಠ – ಆಕಾಶ್. ಯು. – ಪ್ರಥಮ, ಭಕ್ತಿಗೀತೆ – ಹನಿ. ಎ. ಟಿ. – ದ್ವಿತೀಯ, ಸಂಸ್ಕೃತ ಕಂಠಪಾಠ – ಶ್ರೀಪ್ರಸಾದ್ – ದ್ವಿತೀಯ, ಕನ್ನಡ ಕಂಠಪಾಠ – ನೇಹಾ. ಸಿ. ಪಿ. – ತೃತೀಯ, ಅಭಿನಯ ಗೀತೆ – ಸಾನ್ವಿ. ಪಿ. ವಿ. – ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ.