ಗಾಂಧಿನಗರ ಕೆಪಿಎಸ್‌ನಲ್ಲಿ ತಾ. ಮಟ್ಟದ ಫುಟ್‌ಬಾಲ್ ಉದ್ಘಾಟನೆ

0

ಗಾಂಧಿನಗರ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ತಾಲೂಕು ಮಟ್ಟದ ಕಾಲೇಜು ವಿಭಾಗದ ಫುಟ್‌ಬಾಲ್ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮದ ಉದ್ಘಾಟನೆಯನ್ನು ನಗರ ಪಂಚಾಯತ್ ಅಧ್ಯಕ್ಷ ವಿನಯ ಕಂದಡ್ಕ ನೆರವೇರಿಸಿ ಶುಭ ಹಾರೈಸಿದರು. ಕೆ ಪಿ ಎಸ್ ಕಾರ್ಯಧ್ಯಕ್ಷ ಪ್ರವೀಣ್ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಲಯನ್ಸ್ ರಾಜ್ಯಪಾಲ ಎಂ ಬಿ ಸದಾಶಿವ,ಮಾಜಿ ನಗರ ಪಂಚಾಯತ್ ಅಧ್ಯಕ್ಷ ಎನ್. ಎ.ರಾಮಚಂದ್ರ, ನಗರ ಪಂಚಾಯತ್ ಸದಸ್ಯೆ ಪ್ರವೀತಾ ಮತ್ತು ಸದಸ್ಯ ಶರೀಫ್ ಕಂಠಿ, ಕೆ ಪಿ ಎಸ್ ಪ್ರಾಂಶುಪಾಲ ಅಬ್ದುಲ್ ಸಮದ್, ಶಾರದಾ ಕಾಲೇಜಿನ ಪ್ರಾಂಶುಪಾಲೆ ದಯಾಮಣಿ, ಕೆಪಿಎಸ್ ಉಪ ಪ್ರಾಂಶುಪಾಲ ಅರುಣ್ ಕುಮಾರ್, ಪ್ರಾಥಮಿಕ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜೆ.ಕೆ. ರೈ, ವಕೀಲರಾದ ಚಂದ್ರಶೇಖರ್ ಪ್ರಾಥಮಿಕ ವಿಭಾಗದ ಶಿಕ್ಷಕಿ ಎ.ಜಿ. ಭವಾನಿ, ಪೋಷಕರಾದ ಮಜೀದ್ ಅಜೀಜ್ ಮತ್ತು ತೀರ್ಪುಗಾರರು ಇನ್ನಿತರರು ವೇದಿಕೆಯಲ್ಲಿದ್ದರು. ಪ್ರಾಂಶುಪಾಲ ಸಮದ್ ಸ್ವಾಗತಿಸಿದರು. ಪ್ರಾಚಾರ್ಯ ರಾಜೇಶ್ ಪ್ರಾಸ್ತಾವಿಕ ಭಾಷಣ ಮಾಡಿದರು.

ಶಿಕ್ಷಕಿ ಪ್ರೇಮಾ ವಂದಿಸಿದರು. ಸುಳ್ಯ ತಾಲೂಕಿನ ಹಲವಾರು ಕಾಲೇಜುಗಳ ವಿದ್ಯಾರ್ಥಿಗಳು ತಂಡವಾಗಿ ಸ್ಪರ್ಧಾಳುಗಳಾಗಿ ಭಾಗವಹಿಸಿ ದರು.

LEAVE A REPLY

Please enter your comment!
Please enter your name here