ಮೊಸರು ಕುಡಿಕೆ ಉತ್ಸವದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಿಯಾದ ಉಬರಡ್ಕ ಯುವಕರ ತಂಡ 

0

 

ಬಹುಮಾನದ 10 ಸಾವಿರ ಅನಾರೋಗ್ಯ ಪೀಡಿತ ಬಾಲಕಿಗೆ ನೀಡಿದ ಹಿಂದೂ ಜಾಗರಣ ವೇದಿಕೆಯ ಯುವಕರು

ಸುಳ್ಯದಲ್ಲಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ಮತ್ತು ಮೊಸರು ಕುಡಿಕೆ ಉತ್ಸವ ಸಮಿತಿಯ ವತಿಯಿಂದ ನಡೆದ 9ನೇ ವರ್ಷದ ಅಟ್ಟಿ ಮಡಿಕೆ ಒಡೆಯುವ ಸ್ಪರ್ಧೆಯಲ್ಲಿ ಉಬರಡ್ಕ ಹಿಂದೂ ಜಾಗರಣ ವೇದಿಕೆಯ ಯುವಕರ ತಂಡವು ಪ್ರಥಮ ಸ್ಥಾನಿಯಾಗಿದ್ದು
ಇದರಲ್ಲಿ ಪಡೆದ ರೂ.10 ಸಾವಿರದ ಮೊತ್ತವನ್ನು ಅನಾರೋಗ್ಯ ಪೀಡಿತ ಬಾಲಕಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.

ಗುತ್ತಿಗಾರಿನ ವಿಶ್ವನಾಥ್ ಮತ್ತು ಹೇಮಾವತಿ ದಂಪತಿಗಳ ಪುತ್ರಿ ಸಮೀಕ್ಷಾ ಎಂಬ ಬಾಲಕಿ ಕಳೆದ ಕೆಲ ದಿನಗಳಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು ಇದನ್ನು ಮನಗಂಡ ಯುವಕರು ಚಿಕಿತ್ಸೆಗಾಗಿ ಬಹುಮಾನದ ಮೊತ್ತವನ್ನು ನೀಡಿದ್ದು ಸಾರ್ವಜನಿಕ ವಲಯದಲ್ಲಿ ಯುವಕರ ನಿಸ್ವಾರ್ಥ ಸೇವೆಯು ಪ್ರಶಂಸನೆಗೆ ಪಾತ್ರವಾಗಿದೆ.