ಎಲಿಮಲೆ ಸರಕಾರಿ ಪ್ರೌಢಶಾಲೆಗೆ ಸ್ಮಾರ್ಟ್ ಟಿ. ವಿ. ಕೊಡುಗೆ

0

ರೈಟ್ ಟು ಲಿವ್, ಕೋಟೆ ಫೌಂಡೇಶನ್ ಬೆಂಗಳೂರು ಇದರ ವತಿಯಿಂದ ಸರಕಾರಿ ಪ್ರೌಢಶಾಲೆ ಎಲಿಮಲೆಗೆ ಕೊಡುಗೆಯಾಗಿ ನೀಡಿದ ರೂ. 36,500 ಮೌಲ್ಯದ ರೆಡ್ ಮಿ ಸ್ಮಾರ್ಟ್ ಟಿ. ವಿ. ಯ ಉದ್ಘಾಟನಾ ಕಾರ್ಯಕ್ರಮವು ಆ.29ರಂದು ನಡೆಯಿತು.


ಎಸ್.ಡಿ.ಎಂ.ಸಿ. ಕಾರ್ಯಾಧ್ಯಕ್ಷರಾದ ಜಯಂತ ಹರ್ಲಡ್ಕ ಅಧ್ಯಕ್ಷತೆ ವಹಿಸಿದ್ದರು. ಕೋಟೆ ಫೌಂಡೇಶನ್ ಕೋ- .ಆರ್ಡಿನೇಟರ್ ಪ್ರದೀಪ್ ಉಬರಡ್ಕ ಸ್ಮಾರ್ಟ್ ಟಿ. ವಿ ಗೆ ಚಾಲನೆ ನೀಡಿ, ವಿದ್ಯಾರ್ಥಿಗಳು ಸ್ಮಾರ್ಟ್ ಟಿ. ವಿ .ಯ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು. ಎಸ್. ಡಿ. ಎಂ. ಸಿ ಸದಸ್ಯ ಧನಂಜಯ ಬಾಳೆತೋಟ ಹಾಜರಿದ್ದರು. ಶಾಲಾ ಮುಖ್ಯ ಗುರುಗಳಾದ ಶ್ರೀಮತಿ ಸಂಧ್ಯಾಕುಮಾರಿ ವಂದಿಸಿದರು.

ಸಮಾಜ ವಿಜ್ಞಾನ ಶಿಕ್ಷಕ ವಸಂತ ನಾಯಕ್. ಡಿ ಕಾರ್ಯಕ್ರಮ ನಿರೂಪಿಸಿದರು. ಅಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಸಹಕಾರ ನೀಡಿದರು.