ಸುಳ್ಯ ರಾಮ ಭಜನಾ ಮಂದಿರದಲ್ಲಿ ಗಣೇಶೋತ್ಸವಕ್ಕೆ ಕೆ.ಉಪೇಂದ್ರ ಪ್ರಭುರವರಿಂದ ಚಾಲನೆ

0

ಸುಳ್ಯ ಶ್ರೀ ರಾಂಪೇಟೆಯ ಶ್ರೀ ರಾಮ ಭಜನಾ ಮಂದಿರದಲ್ಲಿ ಶ್ರೀ ಗಣೇಶೋತ್ಸವದ ಉತ್ಸವವು ಪುರೋಹಿತ್ ಅಶೋಕ ಯು.ಆರ್.ಭಟ್ ರವರ ನೇತೃತ್ವದಲ್ಲಿ ಗಣಪತಿ ಹವನದೊಂದಿಗೆ ಆರಂಭಗೊಂಡಿತು. ಧರ್ಮದರ್ಶಿ ಮಂಡಳಿ ಯ ಅಧ್ಯಕ್ಷ ಕೆ.ಉಪೇಂದ್ರ ಪ್ರಭು ರವರು ದೀಪ ಪ್ರಜ್ವಲಿಸಿ ಚಾಲನೆ ನೀಡಿದರು.

ಬಳಿಕ ಕೃಷ್ಣ ಪ್ರಜ್ಞಾ ಟ್ರಸ್ಟ್ ವತಿಯಿಂದ ಗೀತಾ ದರ್ಶನ ಕಾರ್ಯಕ್ರಮ ಪ್ರದರ್ಶನ ಗೊಂಡಿತು.ಈ ಸಂದರ್ಭದಲ್ಲಿ ಮಂದಿರದ ಧರ್ಮದರ್ಶಿ ಮಂಡಳಿ ಸದಸ್ಯರು, ಸಾಂಸ್ಕೃತಿಕ ಸಂಘ ದ ಪದಾಧಿಕಾರಿಗಳು ಉಪಸ್ಥಿತರಿದ್ದರು.