ಕೋಟೆಮುಂಡುಗಾರು : 31 ನೇ ವರ್ಷದ ಶ್ರೀ ಗಣೇಶೋತ್ಸವ

0

ಸಂಜೆ ಶೋಭಾಯಾತ್ರೆ, ಮೂರ್ತಿ ಜಲ ಸ್ತಂಭನ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೋಟೆಮುಂಡುಗಾರು ವತಿಯಿಂದ 31 ನೇ ವರ್ಷದ ಶ್ರೀ ಗಣೇಶೋತ್ಸವ ದ.ಕ.ಜಿ.ಪ.ಹಿ.ಪ್ರಾ.ಶಾಲೆ ವಠಾರದಲ್ಲಿ ಇಂದು ನಡೆಯಿತು.


ಬೆಳಿಗ್ಗೆ ಮೂರ್ತಿ ಪ್ರತಿಷ್ಠಾಪನೆ ನಡೆದು ಬಳಿಕ ಶ್ರೀ ಮಂಜುನಾಥ ಭಜನಾ ಮಂಡಳಿ ಕೋಟೆಮುಂಡುಗಾರು ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಬೆಳಗ್ಗೆ ಗಣಪತಿ ಹವನ, ಅಕ್ಷರಾಭ್ಯಾಸ ನಡೆಯಿತು. ಮಧ್ಯಾಹ್ನ ಮಹಾಪೂಜೆ ನಡೆದು ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು.
ಸಂಜೆ ಮಹಾಪೂಜೆ ನಡೆಸಿ ಪ್ರಸಾದ ವಿತರಣೆ ಬಳಿಕ ಸಂಜೆ ಗಂಟೆ 4 ರ ಬಳಿಕ ಶೋಭಾಯಾತ್ರೆ ನಡೆದು ಅಯ್ಯನಕಟ್ಟೆ ಹೊಳೆಯಲ್ಲಿ ಗಣೇಶ ಮೂರ್ತಿ ಜಲ ಸ್ತಂಭನ ನಡೆಯಲಿದೆ.


ಗಣೇಶೋತ್ಸವದ ಅಂಗವಾಗಿ ಅಂಗನವಾಡಿ ಮಕ್ಕಳಿಗೆ , ಶಾಲಾ ಮಕ್ಕಳಿಗೆ, ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳು ನಡೆದು ಬಹುಮಾನ ವಿತರಿಸಲಾಯಿತು.