ಪೈಚಾರ್ ಬದ್ರಿಯಾ ಜುಮಾ ಮಸ್ಜಿದ್ ಮಹಾಸಭೆ 

0

ನೂತನ ಪದಾಧಿಕಾರಿಗಳ ಆಯ್ಕೆ

ಸುಳ್ಯ ಪೈಚಾರ್ ಬದ್ರಿಯಾ ಜುಮಾ ಮಸ್ಜಿದ್ ಇದರ ಮಹಾಸಭೆ ಹಾಗೂ 2022-2023 ನೇ ಸಾಲಿನ ನೂತನ ಸಮಿತಿ ರಚನೆ ಸೆಪ್ಟೆಂಬರ್ 25ರಂದು ನಡೆಯಿತು.


ಪೈಚಾರು ಕುವ್ವತುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ನಡೆದ ಸಭೆಯ ಉದ್ಘಾಟನೆಯನ್ನು ಸ್ಥಳೀಯ ಮಸ್ಜಿದ್ ಖತೀಬರಾದ ಮುನೀರ್ ಸಕಾಫಿ ಪ್ರಾರ್ಥನೆ ಮೂಲಕ ನೆರವೇರಿಸಿದರು. ಕಳೆದ ಸಾಲಿನ ಲೆಕ್ಕಪತ್ರ ಮತ್ತು ವರದಿಯನ್ನು ಕಾರ್ಯದರ್ಶಿ ಮಂಡಿಸಿದರು. ಮಧ್ಯಾಹ್ನ 2 ಗಂಟೆಗೆ ಆರಂಭವಾದ ಸಭೆ ರಾತ್ರಿ ಒಂದು ಗಂಟೆಯವರೆಗೆ ಸುಧೀರ್ಘವಾಗಿ ಚರ್ಚೆಗಳು ನಡೆದು, ಮುಂದಿನ ದಿನಗಳಲ್ಲಿ ಮಸ್ಜಿದ್ ಹಾಗೂ ಮದರಸ ಅಭಿವೃದ್ಧಿಯ ಕುರಿತು ಯೋಜನೆಗಳನ್ನು ರೂಪಿಸಲಾಯಿತು.


ನಂತರ ನಡೆದ ನೂತನ ಸಮಿತಿ ರಚನೆಯಲ್ಲಿ ಅಧ್ಯಕ್ಷರಾಗಿ ಶರೀಫ್ ಟಿ ಎ,ಉಪಾಧ್ಯಕ್ಷರಾಗಿ ರಝಕ್ ಆರ್ತಾಜೆ, ಪ್ರಧಾನ ಕಾರ್ಯದರ್ಶಿ ಹನೀಫ್ ಪಿ ಕೆ ಜೊತೆ ಕಾರ್ಯದರ್ಶಿ ಮುಜೀಬ್ ಪೈಚಾರ್,ಇಸಾಕ್ ಕೆ. ಪಿ,ಖಜಾಂಜಿ ಕರೀಂ ಕೆ ಎಂ, ನಿರ್ದೇಶಕರುಗಳಾಗಿ ಇಬ್ರಾಹಿಂ ಪಿ,ಇಬ್ರಾಹಿಂ ಎಸ್ ಎ,ಅಬ್ಬಾಸ್ ಪಿ ಎ,ಸಿದ್ದೀಕ್ ಕೆ ಪಿ, ಬದ್ರುದ್ದೀನ್ ಪಿ ಬಿ ಇವರನ್ನು ಆಯ್ಕೆ ಮಾಡಲಾಯಿತು. ಮುಜೀಬ್ ಪೈಚಾರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here