ಲ್ಯಾಂಪ್ಸ್ ಸಹಕಾರ ಸಂಘದ ಚೊಕ್ಕಾಡಿ ಶಾಖೆಯಲ್ಲಿ ಗಣಪತಿ ಹವನ

0

 

ಸುಳ್ಯ ಲ್ಯಾಂಪ್ಸ್ ಸಹಕಾರ ಸಂಘದ ಚೊಕ್ಕಾಡಿ ಶಾಖೆಯಲ್ಲಿ ಗಣಪತಿ ಹವನ ಅ. 15ರಂದು
ನಡೆಯಿತು. ಸಂಘದ ಮಾಜಿ ನಿರ್ದೇಶಕ ಎ.ಕೆ. ನಾಯ್ಕ್ ಮತ್ತು ಶ್ರೀಮತಿ ಶೋಭ ಎ.ಕೆ. ನಾಯ್ಕ್ ದಂಪತಿಯ ಪೂಜಾಕಾರ್ಯದಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಎಸ್. ಸೀತಾನಂದ ಬೇರ್ಪಡ್ಕ, ಉಪಾಧ್ಯಕ್ಷರಾದ ಬಿ. ಕುಂಞಣ್ಣ ನಾಯ್ಕ ಬಾಳೆಗುಡ್ಡೆ, ಆಡಳಿತ ಮಂಡಳಿ ನಿರ್ದೇಶಕರಾದ ನೀಲಮ್ಮಕೆ, ಸುಬ್ಬಣ್ಣ ನಾಯ್ಕ ಬಳ್ಳಕ್ಕ, ವಿಠಲ ನಾಯ್ಕ ಎಡಮಂಗಲ, ಶ್ರೀಮತಿ ರೇವತಿ ಡಿ, ಮಾಧವ ಸುಬ್ರಹ್ಮಣ್ಯ, ಮಾಜಿ ನಿರ್ದೇಶಕರಾದ ಗೋಪಾಲಕೃಷ್ಣ ಪಿ, ಶೇಷಪ್ಪ ನಾಯ್ಕ ಟಿ, ಸಂಘದ ಕಾರ್ಯದರ್ಶಿ ಚಂದ್ರಶೇಖರ ಡಿ. ಚೊಕ್ಕಾಡಿ ಶಾಖೆಯ ಸಿಬ್ಬಂದಿ ಮಧುಸೂಧನ, ನಾರಾಯಣ ನಾಯ್ಕ, ಮಾಜಿ ತಾ.ಪಂ. ಸದಸ್ಯ ರಾಧಾಕೃಷ್ಣ ಬೊಳ್ಳೂರು, ಕುಕ್ಕುಜಡ್ಕ ಸೋಸೈಟಿ ಅಧ್ಯಕ್ಷರಾದ ಕೇಶವ, ಸಂಘದ ಸಿಬ್ಬಂದಿಗಳು, ಸದಸ್ಯರು ಹಾಗೂ ಊರವರು ಉಪಸ್ಥಿತರಿದ್ದರು. ಚೊಕ್ಕಾಡಿ ಶಾಖೆಯಲ್ಲಿ ದಿನಬಳಕೆ ವಸ್ತುಗಳು, ಅಲ್ಯುಮಿನಿಯಂ ಪಾತ್ರೆಗಳು, ಸ್ಟೀಲ್ ಪಾತ್ರೆಗಳು, ಪ್ಲಾಸ್ಟಿಕ್, ಸ್ಟೇಷನರಿ, ರಬ್ಬರ್ ಐಟಂಗಳು ದೊರೆಯಲಿದೆ.