ಬೆಳ್ಳಾರೆ ಗ್ರಾಮ ಪಂಚಾಯತ್ ವತಿಯಿಂದ ಗೌರಿಹೊಳೆ ಸಮೀಪ

0

ರುದ್ರಭೂಮಿ‌ ಅಭಿವೃದ್ಧಿಗೆ ಗುದ್ದಲಿ ಪೂಜೆ

 

ಬೆಳ್ಳಾರೆ ಗ್ರಾಮ ಪಂಚಾಯತ್ ವತಿಯಿಂದ ಗೌರಿಹೊಳೆ ಸಮೀಪ ಹಿಂದೂ ರುದ್ರಭೂಮಿ ಅಭಿವೃದ್ಧಿಗೆ ಗುದ್ದಲಿಪೂಜೆ ಅ.19 ರಂದು ನಡೆಯಿತು.

ಬೆಳ್ಳಾರೆ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಅರ್ಚಕರು ಪೂಜಾ ಕಾರ್ಯ ನೆರವೇರಿಸಿದರು.
ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆಯವರು ಮಾತನಾಡಿ ಈಗಾಗಲೇ ಸ್ಮಶಾನದಲ್ಲಿ ಕೆಲವು ಕಾಮಗಾರಿಗಳು ನಡೆದಿದ್ದು ಇನ್ನೂ ಹಲವು ಕೆಲಸಗಳು ಆಗಬೇಕಾಗಿದೆ.
ಅನುದಾನದ ಕೊರತೆಯಿಂದ ಅಭಿವೃದ್ಧಿಗೆ ತೊಂದರೆಯಾಗಿತ್ತು.
ಈಗ ಸುಮಾರು 12.5 ಲಕ್ಷ ರೂ ಅ ನುದಾನದಲ್ಲಿ ವಿವಿಧ ಕಾಮಗಾರಿ ನಡೆದು ಅಭಿವೃದ್ಧಿಗೊಳ್ಳಲಿದೆ.


ಬೆಳ್ಳಾರೆಯಲ್ಲಿ ಸ್ಮಶಾನ ಅತೀ ಅಗತ್ಯವಾಗಿ ಬೇಕಾಗಿರುವುದರಿಂದ ಇನ್ನೂ ಹೆಚ್ಚು ಅನುದಾನ ಬೇಕಾಗುತ್ತದೆ.ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು.
ಎಲ್ಲರ ಸಹಕಾರದಿಂದ ಅಭಿವೃದ್ದಿ ಮಾಡುತ್ತೇವೆ.
ಈ ನಿಟ್ಟಿನಲ್ಲಿ ಎಲ್ಲರೂ ಜಾತಿ,ಮತ,ಪಕ್ಷ ಭೇದವಿಲ್ಲದೆ ಸಹಕಾರ ನೀಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಗೌರಿ ನೆಟ್ಟಾರು, ಸದಸ್ಯರಾದ ದಿನೇಶ್ಚಂದ್ರ ಹೆಗ್ಡೆ, ಅನಿಲ್ ರೈ ಪುಡ್ಕಜೆ, ಶ್ರೀಮತಿ ಜಯಶ್ರೀ, ಶ್ರೀಮತಿನಮಿತಾ, ಶ್ರೀಮತಿ ವೀಣಾ, ಶ್ರೀಮತಿ ಭವ್ಯ, ಬೆಳ್ಳಾರೆ ಜ್ಞಾನ ಗಂಗಾ ಪಬ್ಲಿಕ್ ಸ್ಕೂಲ್ ನ ಸಂಚಾಲಕ ಉಮೇಶ್ ಎಂ.ಪಿ, ಲಕ್ಷ್ಮೀನಾರಾಯಣ ಶ್ಯಾನುಭೋಗ್, ರಾಜೀವಿ ಆರ್.ರೈ, ಆರ್.ಕೆ.ಭಟ್ ಕುರುಂಬುಡೇಲು, ಮಿಥುನ್ ಶೆಣೈ, ಶೆಣೈ, ಪವನ್ ಶೆಣೈ, ಸುನಿಲ್ ರೈ ಪುಡ್ಕಜೆ, ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು, ಗಂಗಾಧರ ರೈ ಪುಡ್ಕಜೆ, ಪ್ರದೀಪ್ ಕುಮಾರ್ ರೈ ಪನ್ನೆ, ಶ್ರೀನಾಥ್ ರೈ ಬಾಳಿಲ, ಪದ್ಮನಾಭ ಬೀಡು, ಜಯರಾಮ ಉಮಿಕ್ಕಳ, ಶ್ರೀಮತಿ ನಿರ್ಮಲ ಜಯರಾಮ್, ಆನಂದ ಬೆಳ್ಳಾರೆ,ಪ್ರೇಮಚಂದ್ರ ಬೆಳ್ಳಾರೆ ಮತ್ತಿತರರು ಉಪಸ್ಥಿತರಿದ್ದರು.