ಜಾಲ್ಸೂರು: ಹುಚ್ಚುನಾಯಿ ಉಪಟಳ, ಸಾರ್ವಜನಿಕರಲ್ಲಿ ಹೆಚ್ಚಿದ ಆತಂಕ

0

ಜಾಲ್ಸೂರಿನ ಪೇಟೆಯಲ್ಲಿ ಹುಚ್ಚುನಾಯಿ ಉಪಟಳವಿದ್ದು, ಇದು ಸಾರ್ವಜನಿಕರನ್ನು ಆತಂಕಕ್ಕೀಡು ಮಾಡಿದೆ.
ಜಾಲ್ಸೂರಿನ ಮುಖ್ಯ ಪೇಟೆಯಲ್ಲಿ ಹುಚ್ಚುನಾಯಿಯೊಂದು ತಿರುಗಾಡುತ್ತಿದ್ದು, ಇದು ಬೀದಿನಾಯಿಗಳಿಗೂ ದಾಳಿ ನಡೆಸುತ್ತಿದ್ದು, ಶಾಲಾ – ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಜನಸಾಮಾನ್ಯರಲ್ಲಿ ಭಯ ಹುಟ್ಟಿಸಿದೆ.
ಈಗಾಗಲೇ ಕೆಲವೊಂದು ಮನೆಯ ಸಾಕುನಾಯಿಗಳಿಗೂ ಕಚ್ಚಿದ್ದು, ಬೀದಿನಾಯಿಗಳ ಮೇಲೂ ದಾಳಿ ನಡೆಸಿರುವುದಾಗಿ ತಿಳಿದುಬಂದಿದೆ.
ಈ ಬಗ್ಗೆ ಜಾಲ್ಸೂರು ಗ್ರಾ.ಪಂ. ಅಧ್ಯಕ್ಷ ಕೆ.ಎಂ. ಬಾಬು ಅವರು ಸುಳ್ಯದ ಪಶುಸಂಗೋಪನೆ ಇಲಾಖೆ ಹಾಗೂ ತಾಲೂಕು ವೈದ್ಯಾಧಿಕಾರಿ ಡಾ. ನಂದಕುಮಾರ್ ಅವರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.