ಮೇನಾಲ ಶಾಲಾ ದುರಸ್ತಿ ಕಾರ್ಯ

0


ಅಜ್ಜಾವರ ಗ್ರಾಮದ ಮೇನಾಲ ಕಿರಿಯ ಪ್ರಾಥಮಿಕ ಶಾಲೆಯ ದುರಸ್ತಿ ಕಾಮಗಾರಿ ನಡೆಯುತ್ತಿದೆ. ಶಾಲೆಯ ಮೇಲ್ಚಾವಣಿ ನಾದುರಸ್ತಿ ಯಲ್ಲಿದ್ದ ಕಾರಣ ತರಗತಿಯೊಳಗೆ ಕುಳಿತು ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ನಡೆಸಲು ಭಯ ಪಡುವ ವಾತಾವರಣವಿತ್ತು.

ಇದೀಗ ಶಾಸಕರೂ ಸಚಿವರೂ ಆಗಿರುವ ಎಸ್ ಅಂಗಾರ ಇವರ ಶಿಫಾರಸ್ಸಿನಂತೆ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ ಹಾಗೂ ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ ಇವರ ಮುತುವರ್ಜಿಯಿಂದ ತಾಲೂಕು ಪಂಚಾಯತ್ ನ ಅನಿರ್ಬಂಧಿತ ಅನುದಾನದಲ್ಲಿ ಈ ಕಾಮಗಾರಿ ನಡೆಯುತ್ತಿದೆ. ಸುಮಾರು ನೂರು ವರ್ಷಗಳ ಇತಿಹಾಸವಿರುವ ಈ ಶಾಲೆಯಲ್ಲಿ ಇದೀಗ 62 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.