ಕೆವಿಜಿ ಐಪಿಎಸ್ ನ ವಿದ್ಯಾರ್ಥಿಗಳ ಕ್ರೀಡಾ ಸಾಧನೆ

0

ಕೆವಿಜಿ ಐಪಿಎಸ್ ನ ವಿದ್ಯಾರ್ಥಿಗಳ ಕ್ರೀಡಾ ಸಾಧನೆ


ಬ್ರಹ್ಮಗಿರಿ ಸಹೋದಯ ಕಾಂಪ್ಲೆಕ್ಸ್ ಕೊಡಗು ಇದರ ಸಹಯೋಗದಲ್ಲಿ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ ಮಡಿಕೇರಿಯಲ್ಲಿ ನ.19 ರಂದು ನಡೆದ  ಅಥ್ಲೆಟಿಕ್ ಮೀಟ್ ನಲ್ಲಿ ಕೆವಿಜಿ ಇಂಟರ್ ನ್ಯಾಷನಲ್  ಪಬ್ಲಿಕ್ ಸ್ಕೂಲ್ ನ ಹಲವು ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನೀತರಾಗಿದ್ದಾರೆ.

ಪ್ರಾಥಮಿಕ ವಿಭಾಗದಲ್ಲಿ ಏಳನೇ ತರಗತಿಯ ವಿಶಾಲ್ ಕರಣ್ ಉದ್ದ ಜಿಗಿತದಲ್ಲಿ ತೃತೀಯ, ರಿಲೆಯಲ್ಲಿ ದ್ವಿತೀಯ ಹಾಗು ಏಳನೇ ತರಗತಿಯ ಪ್ರತೀಕಾ 400ಮೀ. ಓಟದಲ್ಲಿ ತೃತೀಯ, ಉದ್ದ ಜಿಗಿತದಲ್ಲಿ ತೃತೀಯ, ರಿಲೆಯಲ್ಲಿ ದ್ವಿತೀಯ ಬಹುಮಾನವನ್ನು ಪಡೆದುಕೊಂಡಿದ್ದಾರೆ. ಪ್ರೌಢಶಾಲಾ ವಿಭಾಗದಲ್ಲಿ 10ನೇ ತರಗತಿಯ ಗೌತಮ್ ಕೆ.ಟಿ ಉದ್ದ ಜಿಗಿತದಲ್ಲಿ ದ್ವಿತೀಯ, ರಿಲೆಯಲ್ಲಿ ಪ್ರಥಮ ಹಾಗು ಹತ್ತನೇ ತರಗತಿಯ ವೈಶಾಲಿ ಗುಂಡೆಸೆತ ಸ್ಪರ್ಧೆಯಲ್ಲಿ ತೃತೀಯ, ರಿಲೆಯಲ್ಲಿ ತೃತೀಯ ಬಹುಮಾನವನ್ನು ಪಡೆದುಕೊಂಡರು. ಮಹಮ್ಮದ್ ಶಮ್ಮಾಸ್, ಅಬ್ದುಲ್ ರಿಫಾತ್, ಮೊಹಮ್ಮದ್ ರಾಝಿ ಎ. ಎಮ್, ಅಬ್ದುಲ್ ಮನನ್, ಅಭ್ಯುದ್ ಅನಂತ್, ರಕ್ಷಣ್ ಎಚ್‌.ಬಿ, ಮನ್ವಿತಾ ಸಿ. ಎಚ್, ನಿಷ್ಕ, ಸೀಮಾ ಆಯಿಷ, ನವ್ಯ ಆರ್, ಆಯಿಷ ನಸ್ವ, ಪ್ರತೀಕ್ಷಾ, ನಿಹಾಲ್ ಅಝೀಝ್, ಶಿವಶಂಕರ್, ಇಶನ್ ಅಹ್ಮದ್ ಜಿ, ಲಿಖಿತ್ ಬಿ.ಕೆ, ಶಮಂತ್ ಎಸ್.ಎಂ, ಅಭಿಷೇಕ್ ಗೌಡ, ಅಹ್ಮದ್ ಅಝೀಲ್, ಅಮೋಘ ಎಂ.ಎಸ್, ಅಭಿಜ್ಞಾ ಭಟ್, ಸಾನ್ವಿ, ಫಾತಿಮತ್ ರಿಧಾ , ಸಾಕ್ಷಿ ಮತ್ತು ಜನನಿ ಈ ಸ್ಪರ್ಧೆಯಲ್ಲಿ ಭಾಗವಹಿಸಿ ಪದಕ ಮತ್ತು ಪ್ರಮಾಣ ಪತ್ರವನ್ನು ಸ್ವೀಕರಿಸಿದರು.
ಈ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಕರಾದ ತೀರ್ಥವರ್ಣ ಬಳ್ಳಡ್ಕ ಮತ್ತು ಶ್ರೀಮತಿ ಸುಪ್ರಿಯಾ ಮಾರ್ಗದರ್ಶನವನ್ನು ನೀಡಿದ್ದರು. ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಮತ್ತು ಬಹುಮಾನಿತ ಎಲ್ಲಾ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿಯ ಸಂಚಾಲಕ ಡಾ. ರೇಣುಕಾ ಪ್ರಸಾದ್ ಕೆ.ವಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ, ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್, ಉಪ ಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ ಮತ್ತು ಎಲ್ಲಾ ಶಿಕ್ಷಕ ವೃಂದದವರು ಅಭಿನಂದಿಸಿದರು.