ಪ್ರೇಯಸಿಯೊಂದಿಗೆ ಸುಳ್ಯ ಲಾಡ್ಜ್ ನಲ್ಲಿ ತಂಗಿದ್ದ ವ್ಯಕ್ತಿ, ವಿಷಯ ತಿಳಿದು ಪತ್ನಿ ಬಂದು ಲಾಡ್ಜ್ ಮುಂಭಾಗ ರಂಪಾಟ

0

ಮಂಗಳೂರು ಮೂಲದ ವಿವಾಹಿತ ಯುವಕನೋರ್ವ ಬೇರೆ ಯುವತಿಯೊಂದಿಗೆ ಸುಳ್ಯದ ಗಾಂಧಿನಗರ ಲಾಡ್ಜಿಗೆ ಬಂದು ತಂಗಿದ್ದಾರೆಂದು ತಿಳಿದ ಯುವಕನ ಪತ್ನಿ ಡಿ.೧೧ರಂದು ಸಂಜೆ ಸುಳ್ಯಕ್ಕೆ ಬಂದು ಅವರು ತಂಗಿದ್ದ ಲಾಡ್ಜ್ ಬಳಿ ಬಂದು ಬೀದಿರಂಪ ಮಾಡಿದ ಘಟನೆ ವರದಿಯಾಗಿದೆ.


ಲಾಡ್ಜ್ ನಲ್ಲಿದ್ದ ಯುವತಿಯ ಜತೆಗಿದ್ದ ವಿವಾಹಿತ ಯುವಕ ತನ್ನ ಪತ್ನಿ ಲಾಡ್ಜ್‌ನ ರಿಸೆಪ್ಶನ್ ಬಳಿಗೆ ಬಂದು ನಿಂತಿರುವ ವಿಷಯ ತಿಳಿದು ಪ್ರೇಯಸಿಯೊಂದಿಗೆ ಲಾಡ್ಜ್ ನಿಂದ ಹೊರಗೆ ಬಂದಿದ್ದಾರೆ. ಇವರು ಬರುವುದನ್ನು ಕಾಯುತ್ತಿದ್ದ ಆತನ ಹೆಂಡತಿ ರಸ್ತೆಯಲ್ಲಿ ಗಂಡನನ್ನು ಮತ್ತು ಆ ಯುವತಿಯನ್ನು ತೀವ್ರವಾಗಿ ತರಾಟೆಗೆತ್ತಿಕೊಳ್ಳತೊಡಗಿದ್ದಾರೆ. ಬೊಬ್ಬೆ ಕೇಳಿ ನೂರಾರು ಜನ ಜಮಾಯಿಸಿದರು. ಕೋಪಗೊಂಡಿದ್ದ ಪತ್ನಿಯನ್ನು ಸಮಾಧಾನಪಡಿಸಲು ಯುವಕ ಎಷ್ಟೇ ಪ್ರಯತ್ನ ಪಟ್ಟರೂ ಆತನಿಗೆ ಸಾಧ್ಯವಾಗಲಿಲ್ಲ. ಪತಿಯನ್ನು ಮತ್ತು ಆ ಯುವತಿಯನ್ನು ರಸ್ತೆಯಲ್ಲಿ ಎಳೆದಾಡಿ, ತನ್ನ ಆಕ್ರೋಶವನ್ನು ವ್ಯಕ್ತಪಡಿಸಿದ ಮಹಿಳೆ ಆ ಯುವತಿಯನ್ನು ಹಿಡಿದು ನಿಲ್ಲಿಸಿ ತನ್ನ ಕೋಪವನ್ನು ಹೊರ ಹಾಕುತ್ತಿದ್ದರು. ಪೊಲೀಸರಿಗೆ ವಿಷಯ ತಿಳಿದು ಅವರು ಬಂದು ಮೂವರನ್ನೂ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.