ಬೆಳ್ಳಾರೆಯಲ್ಲಿ ಸ್ನೇಹಿತರ ಕಲಾಸಂಘದ ಆಶ್ರಯದಲ್ಲಿ ಸತ್ಯನಾರಾಯಣ ಪೂಜೆ, ಕುಣಿತ ಭಜನೋತ್ಸವ

0

ಸ್ನೇಹಿತರ ಕಲಾ‌ ಸಂಘ ಬೆಳ್ಳಾರೆ ಇದರ ಆಶ್ರಯದಲ್ಲಿ ಸುಮಾರು 6 ತಿಂಗಳುಗಳಿಂದ ನಡೆಯುತ್ತಿರುವ ಮಕ್ಕಳ ಕುಣಿತ ಭಜನಾ ತರಬೇತಿಯ ಸಮಾರೋಪ, ರಂಗಪ್ರವೇಶ, ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಕುಣಿತ ಭಜನೋತ್ಸವ ಕಾರ್ಯಕ್ರಮ ಡಿ. 14ರಂದು ಅಜಪಿಲ ಶ್ರೀ ಮಹಾಲಿಂಗೇಶ್ವರ ಸಭಾಭವನ ಬೆಳ್ಳಾರೆಯಲ್ಲಿ ನಡೆಯಿತು.


ಬೆಳಿಗ್ಗೆ ಪ್ರಾರ್ಥನೆಯ ಬಳಿಕ ಶ್ರೀ ಸತ್ಯನಾರಾಯಣ ಪೂಜೆ ಆರಂಭಗೊಂಡಿತು. ಬಳಿಕ ಶ್ರೀ ಮಹಾಲಿಂಗೇಶ್ವರ ಮಹಿಳಾ ಭಜನಾ ತಂಡ ಬೆಳ್ಳಾರೆ ಇವರಿಂದ ಭಜನಾ ಸಂಕೀರ್ತನೆ ನಡೆಯಿತು.

ಮಧ್ಯಾಹ್ನ ಮಂಗಳಾರತಿ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ಜರಗಿತು. ಅಪರಾಹ್ನ ವಿವಿಧ ಭಜನಾ ತಂಡಗಳಿಂದ ಕುಣಿತ ಭಜನೋತ್ಸವ ನಡೆಯಿತು. ಬಳಿಕ ಸ್ನೇಹಿತರ ಕಲಾ ಸಂಘದ ಅಧ್ಯಕ್ಷ ವಸಂತ ಉಲ್ಲಾಸ್ ರವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ಶ್ರೀ ಕ್ಷೇತ್ರ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಸಾದ್ವಿ ಮಾತಾನಂದಮಯಿ ಸಭಾ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು. ಕರ್ನಾಟಕ ತುಳು ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಧಾರ್ಮಿಕ ಉಪನ್ಯಾಸ ನೀಡಿದರು.

ಬೆಳ್ಳಾರೆ ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ ಪನ್ನೆ, ಸುಳ್ಯ ತಾಲೂಕು ಭಜನಾ ಪರಿಷತ್ ಗೌರವಾಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ, ಬೆಳ್ಳಾರೆ ಜಿ.ಪಂ. ಕ್ಷೇತ್ರದ ಸದಸ್ಯ ಎಸ್.ಎನ್. ಮನ್ಮಥ, ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತಾಧಿಕಾರಿ ಶ್ರೀಮತಿ ಸುಹಾನ, ಮೆಸ್ಕಾಂ ಬೆಳ್ಳಾರೆ ವಿಭಾಗದ ಜೂನಿಯರ್ ಇಂಜಿನಿಯರ್ ಪ್ರಸಾದ್ ಕತ್ಲಡ್ಕ, ಶ್ರೀ ಜಲದುರ್ಗಾದೇವಿ ಪ್ರಸನ್ನ ಅರ್ಥ್ ಮೂವರ್ಸ್, ಟ್ರಾನ್ಸ್ ಪೋರ್ಟ್ ಮತ್ತು ಬೋರ್ ವೆಲ್ಸ್ ಮಾಲಕ ಪದ್ಮನಾಭ ಬೀಡು, ಅಜಪಿಲ ಶ್ರೀ ಮಹಾವಿಷ್ಣುಮೂರ್ತಿ ಸೇವಾ ಸಮಿತಿ ಅಧ್ಯಕ್ಷ ಶೇಷಪ್ಪ ಕುಲಾಲ್ ಬಸ್ತಿಗುಡ್ಡೆ, ಬೆಳ್ಳಾರೆ ಸ್ನೇಹಶ್ರೀ ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಕುಸುಮಾ ಕುರುಂಬುಡೇಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಡಬ ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್ ಕಾರ್ಯದರ್ಶಿ ಹಾಗೂ ಭಜನಾ ತರಬೇತುದಾರರಾದ ಸದಾನಂದ ಆಚಾರ್ಯ ಕಾಣಿಯೂರುರವರಿಗೆ ಈ ಸಂದರ್ಭದಲ್ಲಿ ಗೌರವಾರ್ಪಣೆ ಮಾಡಿ ಸನ್ಮಾನಿಸಲಾಯಿತು. ಸ್ನೇಹಿತರ ಕಲಾ ಸಂಘದ ಪೂರ್ವಾಧ್ಯಕ್ಷ ಕೊರಗಪ್ಪ ನಾಯ್ಕ್ ಕುರುಂಬುಡೇಲು ಸನ್ಮಾನಿತರ ಸನ್ಮಾನ ಪತ್ರ ವಾಚಿಸಿದರು. ಇದೇ ಸಂದರ್ಭದಲ್ಲಿ ಸ್ನೇಹಾಂಜಲಿ ಭಜನಾ ತಂಡ ಎನ್ನುವಂತ ನಾಮಫಲಕವನ್ನು ವೇದಿಕೆಯಲ್ಲಿ ಅನಾವರಣಗೊಳಿಸಲಾಯಿತು. ಕು.‌ನಿತ್ಯ, ಕು. ಆಶಿಕಾ, ಕು. ತನ್ವಿ, ಕು. ಜನನಿ, ಪ್ರಾರ್ಥಿಸಿದರು. ಸ್ನೇಹಿತರ ಕಲಾ ಸಂಘದ ಮಾಜಿ ಕಾರ್ಯದರ್ಶಿ ಸಂಜಯ್ ನೆಟ್ಟಾರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ ಸ್ನೇಹಿತರ ಕಲಾ ಸಂಘದ ಕಾರ್ಯದರ್ಶಿ ಆನಂದ ಮಣಿಯಾಣಿ ಉಮಿಕ್ಕಳ ವಂದಿಸಿದರು. ಪ್ರದೀಪ್ ಕುಮಾರ್ ರೈ ಪನ್ನೆ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ವಿಠಲ ನಾಯಕ್ ಕಲ್ಲಡ್ಕ ಮತ್ತು ಬಳಗದವರಿಂದ ಗೀತ ಸಾಹಿತ್ಯ ಸಂಭ್ರಮ ನಡೆಯಿತು.

ಯುವಶಕ್ತಿಯನ್ನು ಸದ್ಭಲಕೆ ಮಾಡಿಕೊಂಡರೆ ಅದು ದೇಶಕ್ಕೆ ಶಕ್ತಿಯನ್ನು ತುಂಬಿದಂತೆ. ಭಾರತ ಭಕ್ತಿ ಮತ್ತು ಶಕ್ತಿಯಿಂದ ತುಂಬಿಕೊಂಡಿರುವ ದೇಶ. ಭಜನೆ ಭಕ್ತ ಮತ್ತು ಭಗವಂತನ ನಡುವಿನ ಅನುಸಂದಾನ. ಅದು ಬೆಳ್ಳಾರೆಯಲ್ಲಿ ಸ್ನೇಹಿತರ ಕಲಾ ಸಂಘದ ಮೂಲಕ‌ ಸಾಕಾರಗೊಂಡಿದೆ – ಸಾದ್ವಿ ಶ್ರೀ ಮಾತಾನಂದಮಯಿ

ನಮ್ಮ ಮನಸ್ಸಿನಲ್ಲಿರು ಕಲ್ಮಶಗಳೆಲ್ಲ ದೂರಮಾಡಿ ಮನಸ್ಸು ಶುದ್ಧೀಕರಣಗೊಳಿಸುವ ಏಕೈಕ ಸಾಧನ ಭಜನೆ. ಎಲ್ಲಿ ಭಜನೆ ಇದೆಯೋ ಅಲ್ಲಿ ವಿಭಜನೆ ಇಲ್ಲ. ಅಲ್ಲಿ ಸಂಘಟನೆಗೊಳ್ಳುತ್ತದೆ – ಕತ್ತಲ್ ಸಾರ್