ಪಡ್ಡಂಬೈಲು ಕರ್ಲಪ್ಪಾಡಿ ಮನೆಯಲ್ಲಿ ಶ್ರೀ ದೈವಗಳ ಧರ್ಮ ನಡಾವಳಿ, ದೈವ ನರ್ತಕರಿಗೆ ಮತ್ತು ಚಾಕ್ರಿಯವರು ಸೇರಿದಂತೆ 18‌ ಮಂದಿಗೆ ಬೆಳ್ಳಿ ಕಡಗ ನೀಡಿ ಗೌರವ ಸಮರ್ಪಣೆ

0

ಅಜ್ಜಾವರ ಗ್ರಾಮದ ಪಡ್ಡಂಬೈಲು ಕರ್ಲಪ್ಪಾಡಿ ಮನೆಯಲ್ಲಿ ಶ್ರೀ ವಿಷ್ಣುಮೂರ್ತಿ ಧರ್ಮದೈವ ಪಾಷಾಣಮೂರ್ತಿ ಹಾಗೂ ಉಪ ದೈವಗಳ ಧರ್ಮ ನಡಾವಳಿ ನೇಮೋತ್ಸವವು ಡಿ.18 ಮತ್ತು 19 ರಂದು ನಡೆಯಿತು.

ಡಿ.18 ರಂದು ಸಂಜೆ ಶ್ರೀ ದೈವಗಳ ಭಂಡಾರ ಆಗಮಿಸಿ ನಂತರ ಶ್ರೀ ವಿಷ್ಣುಮೂರ್ತಿ ದೈವದ ತೊಡಂಞಲ್ ಹಾಗೂ ಗುರು ಕಾರ್ನೋರು ದೈವದ ಕೋಲ ನಡೆಯಿತು .ಆಗಮಿಸಿದ ಎಲ್ಲರಿಗೂ ಅನ್ನ ಸಂತರ್ಪಣೆಯಾಯಿತು. ಮರುದಿನ ಪ್ರಾತ:ಕಾಲ ಶ್ರೀ ಪೊಟ್ಟನ್ ದೈವದ ಕೋಲವಾಗಿ ಶ್ರೀ ರಕ್ತೇಶ್ವರೀ ಹಾಗೂ ಶ್ರೀ ವಿಷ್ಣುಮೂರ್ತಿ, ಧರ್ಮ ದೈವ ಮತ್ತು ಪಾಷಾಣಮೂರ್ತಿ ದೈವಗಳ ಧರ್ಮ ನಡಾವಳಿಯು ನಡೆಯಿತು. ಮಧ್ಯಾಹ್ನ ಆಗಮಿಸಿದ ಊರ ಪರ ಊರ ಭಕ್ತಾದಿಗಳಿಗೆ ಪ್ರಸಾದ ವಿತರಣೆಯಾಗಿ ಅನ್ನ ಸಂತರ್ಪಣೆ ನೆರವೇರಿತು.

ಪಡ್ಡಂಬೈಲು ಕುಟುಂಬದ ಹಿರಿಯ ಕಿರಿಯ ಸದಸ್ಯರು ಸಹಕರಿಸಿದರು. ಪಡ್ಡಂಬೈಲು ಮನೆತನದ ಹಿರಿಯರಾದ ಪುಟ್ಟಣ್ಣ ಗೌಡ ಮತ್ತು ಮನೆಯವರಾದ ಉತ್ತಯ್ಯ ಗೌಡ ಪಡ್ಡಂಬೈಲು, ಕೃಷ್ಣಪ್ಪ ಗೌಡ ಪಡ್ಡಂಬೈಲು, ವಿಜಯ ಗೌಡ ಪಡ್ಡಂಬೈಲು ಸರ್ವರನ್ನೂ ಸ್ವಾಗತಿಸಿದರು.

ಸಭೆ ಮತ್ತು ಗೌರವಾರ್ಪಣೆ:

ಡಿ.18 ರಂದು ಸಂಜೆ ನಡೆದ ಸಮಾರಂಭದಲ್ಲಿ ಪಡ್ಡಂಬೈಲು ಮನೆತನದ ಹಿರಿಯರಾದ ದಿ.ಅಣ್ಣಯ್ಯ ಗೌಡ ಮತ್ತು ದಿ. ಬಾಲಕ್ಕ ಪಡ್ಡಂಬೈಲು ರವರ ಸ್ಮರಣಾರ್ಥವಾಗಿ ಅವರ ಪುತ್ರರಾದ ಕೃಷ್ಣಪ್ಪ ಗೌಡ ಮತ್ತು ವಿಜಯ ಗೌಡ ಪಡ್ಡಂಬೈಲು ರವರು ವಿಷ್ಣುಮೂರ್ತಿ, ಧರ್ಮ ದೈವ, ಪಾಷಾಣಮೂರ್ತಿ ದೈವಗಳ ನರ್ತಕರಾದ ಜನಾರ್ಧನ ಕವೆನಾಡ, ಕುಂಞರಾಮ ಪಣಿಕ್ಕರ್, ಧನಂಜಯ ಪಣಿಕ್ಕರ್, ರವಿ ಪಣಿಕ್ಕರ್, ಹರಿ ಪಣಿಕ್ಕರ್, ಪುರುಷೋತ್ತಮ ಪಣಿಕ್ಕರ್, ಲೋಹಿತ್ ಪಣಿಕ್ಕರ್, ಪ್ರಸಾದ್ ಪಣಿಕ್ಕರ್, ಜನಾರ್ದನ ಪರವ,ವಿಜಿತ್ ಕುಮಾರ್, ಸದಾನಂದ ಅಜಿಲ ಹಾಗೂ ದೈವದ ಚಾಕರಿಗೈಯುವ ಇತರ ಸಮುದಾಯದವರಾದ
ಸತೀಶ್ ಬೆಳ್ಚಪ್ಪಾಡ,ಆನಂದ ಬೆಳ್ಚಪ್ಪಾಡ, ರವಿಪ್ರಸಾದ್ ಮಡಿವಾಳ, ಪಕೀರ ಪಾಟಾಳಿ, ಮನೀಶ್ ಭಂಡಾರಿ, ದೈವದ ಪೂಜಾರಿಗಳಾದ
ಕರುಣಾಕರ ಗೌಡ, ಕೆ.ವಿಶ್ವನಾಥ ಗೌಡ ಪಡ್ಡಂಬೈಲು ರವರನ್ನು ಸೇರಿದಂತೆ ಒಟ್ಟು 18 ಮಂದಿಯನ್ನು ಬೆಳ್ಳಿಯ‌ ಕೈ ಕಡಗ ತೊಡಿಸಿ ಶಾಲು‌ ಹಾಕಿ ಸನ್ಮಾನ ಪತ್ರ ನೀಡಿ ಪಡ್ಡಂಬೈಲು ಮನೆಯ ಪರವಾಗಿ ಗೌರವಿಸಲಾಯಿತು.

ವೇದಿಕೆಯಲ್ಲಿ ಕೊಪ್ಪಳ ಜಿಲ್ಲೆಯ ಕಾರಾಟಗಿ ತಾಲೂಕಿನ ಬರಗಾಲ ಸಿದ್ಧನಾಥ ಮಹಾರಾಜರ ಪುಣ್ಯಾಶ್ರಮ ಬ್ರಹ್ಮಗಡ್ಡೆ ಮಠ ಮುಸ್ಟೂರು ಇದರ ಸ್ವಾಮೀಜಿ ಶೊ.ಬ್ರ ಶ್ರೀ ಋಷಿಮಾಧವನಾಂದ ಮಹರಾಜರು ಆಶೀರ್ವಚನ ನೀಡಿದರು.
ವೇದಿಕೆಯಲ್ಲಿ ಪಾಣತ್ತೂರಿನ ಸುಧಾಕರ ನಂಬಿಯಾರ್ ಮತ್ತು ಶ್ರೀಮತಿ ಭಾನುಮತಿ‌ ದಂಪತಿ, ಕರ್ಲಪ್ಪಾಡಿ ಶಾಸ್ತಾವೇಶ್ವರ ದೇವಸ್ಥಾನದ ವ್ಯ.ಸ.ಮಾಜಿ ಅಧ್ಯಕ್ಷ ಮುದ್ದಪ್ಪ ಗೌಡ ಕರ್ಲಪ್ಪಾಡಿ, ಪಡ್ಡಂಬೈಲು ಮನೆತನದ ಹಿರಿಯರಾದ ಪುಟ್ಟಣ್ಣ ಗೌಡ ಪಿ, ರಾಮಚಂದ್ರ ಗೌಡ ‌ಪಿ, ವಿಷ್ಣುಮೂರ್ತಿ ದೈವ ನರ್ತಕ ಜನಾರ್ಧನ ಕವೆನಾಡ, ತಾರಸಿ ಕೃಷಿಕ‌ ಕೃಷ್ಣಪ್ಪ ಗೌಡ ‌ಪಡ್ಡಂಬೈಲು, ವಿಜಯ ಗೌಡ ಪಡ್ಡಂಬೈಲು ಉಪಸ್ಥಿತರಿದ್ದರು.
ಕು.ರಶ್ಮಿ ಪಡ್ಡಂಬೈಲು ‌ಪ್ರಾರ್ಥಿಸಿದರು. ಪಡ್ಡಂಬೈಲು ಕೃಷ್ಣಪ್ಪ ಗೌಡ ಪ್ರಾಸ್ತಾವಿಕ ಮಾತನಾಡಿದರು.
ವಿಜಯ ಗೌಡ ಪಡ್ಡಂಬೈಲು ಎಲ್ಲರನ್ನೂ ಸ್ವಾಗತಿಸಿದರು. ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


ಈ ಸಂದರ್ಭದಲ್ಲಿ ಪಡ್ಡಂಬೈಲು ಕರ್ಲಪ್ಪಾಡಿ ಭೂಮಿಯ ಒಡೆತನಕ್ಕೆ ಸಂಬಂಧಿತರಾದ ಸುಧಾಕರ ನಂಬಿಯಾರ್ ಮತ್ತು ಭಾನುಮತಿ ದಂಪತಿಯನ್ನು ಸನ್ಮಾನಿಸಲಾಯಿತು. ನೇಮೋತ್ಸವಕ್ಕೆ ಸಹಕರಿಸಿದ ಎಲ್ಲಾ ವರ್ಗದವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.