ಜಯನಗರದ ಆಟೋ ಚಾಲಕ ಹರೀಶ್ ನಿಧನ

0

ಜಯನಗರ ನಿವಾಸಿ ಆಟೋ ಚಾಲಕರಾದ ಹರೀಶ್ (52 ವರ್ಷ)ರವರು ಇಂದು ಸಂಜೆ ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ನಿಧನರಾದರು.
ಇಂದು ಬೆಳಿಗ್ಗಿನಿಂದ ಹೊಟ್ಟೆ ನೋವು ಎಂದು ಹೇಳುತ್ತಿದ್ದು, ಸಂಜೆ 4 ಗಂಟೆಯ ಸಮಯಕ್ಕೆ ಆರೋಗ್ಯದಲ್ಲಿ ಏರುಪೇರು ಕಂಡು ಮನೆಯವರು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆತಂದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾದರು.


ಮೃತರು ಪತ್ನಿ ಉಷಾ, ಪುತ್ರರಾದ ಚಿಂತನ್ ಹಾಗೂ ಭವಿತ್ ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.