ಆಲೆಟ್ಟಿ- ಕಲ್ಲೆಂಬಿ ಗದ್ದೆಯಲ್ಲಿ ಪುರುಷರ ಮಹಿಳೆಯರ ಕೆಸರುಗದ್ದೆ ಕ್ರೀಡಾಕೂಟದ ಕಲರವ

0

ಬಾರ್ಪಣೆ ವಿಕ್ರಮ ಯುವಕ ಮಂಡಲದ ಆಯೋಜನೆ-
ಕೆಸರೆರೆಚಿಕೊಂಡು ಸಂಭ್ರಮಿಸಿದ ಕ್ರೀಡಾಪಟುಗಳು

ಆಲೆಟ್ಟಿಯ ಬಾರ್ಪಣೆ ವಿಕ್ರಮ ಯುವಕ ಮಂಡಲದ ಆಶ್ರಯದಲ್ಲಿ ಮುಕ್ತ ಕೆಸರುಗದ್ದೆ ಕ್ರೀಡಾ ಕೂಟ-2023 ಹಾಗೂ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿದ ಕಾರ್ಯಕ್ರಮವು ಜ.1ರಂದು ನಿವೃತ್ತ ಸೈನಿಕ ಕಲ್ಲೆಂಬಿ ಗಂಗಾಧರ ಗೌಡ ರವರ ಗದ್ದೆಯಲ್ಲಿ ನಡೆಯಿತು.


ಬೆಳಗ್ಗಿನ ನಿಂದ ಆರಂಭಗೊಂಡ ಕ್ರೋಡೋತ್ಸವು ರಾತ್ರಿಯ ತನಕ ಸಂಭ್ರಮದಿಂದ ನಡೆಯಿತು. ಜಿಲ್ಲೆಯ ಹಾಗೂ ತಾಲೂಕಿನ ವಿವಿಧ ಕಡೆಗಳಿಂದ ಸ್ಪರ್ಧಿಗಳು ಆಗಮಿಸಿ ಕ್ರೀಡಾ ಕೂಟದಲ್ಲಿ ಭಾಗವಹಿಸಿದರು.
ಪುರುಷರ ಮುಕ್ತ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ವಿಷ್ಣು ಬಳಗ ಸಂಪ್ಯ ಪಡೆದುಕೊಂಡಿತು.


ದ್ವಿತೀಯ ಬಹುಮಾನ ವಿಷ್ಣು ಬಳಗ ಅಡ್ಕ ಪುತ್ತೂರು ಮತ್ತು
ಮಹಿಳೆಯರ ಮುಕ್ತ ಹಗ್ಗ ಜಗ್ಗಾಟದಲ್ಲಿ ಪ್ರಥಮ- ನಾಗಶ್ರೀ ಫ್ರೆಂಡ್ಸ್,
ದ್ವಿತೀಯ-ಎ.ಡಬ್ಲೂ. ಸಿ ಸುಳ್ಯ ಪಡೆದುಕೊಂಡಿತು.
ರೋಮಾಂಚಕಾರಿ
ಪಿರಮಿಡ್ ರಚಿಸಿ ಮಡಕೆ ಒಡೆಯುವ ಸ್ಪರ್ಧೆಯು ಆಕರ್ಷಕವಾಗಿತ್ತು.


ಪುರುಷರ ಮುಕ್ತ ವಾಲಿಬಾಲ್ ಪಂದ್ಯಾಟದಲ್ಲಿ ಪ್ರಥಮ-ಷ್ಯಾಡೋ ಫೈಟರ್ಸ್ ಅಜ್ಜಾವರ,
ದ್ವಿತೀಯ-ಕೆ.ಎಫ್.ಡಿ.ಸಿ.ನಾಗಪಟ್ಟಣ ಹಾಗೂ
ಪುರುಷರ ಮುಕ್ತ ಕಬಡ್ಡಿ ಪಂದ್ಯಾಟದಲ್ಲಿ ಸ್ಪಂದನ ಗೆಳೆಯರ ಬಳಗ ಅಡ್ತಲೆ ಪ್ರಥಮ ಬಹುಮಾನ ಗಳಿಸಿಕೊಂಡಿತು.

ಮಹಿಳೆಯರ ತ್ರೋಬಾಲ್ ನಲ್ಲಿ ಪ್ರಥಮ ನಾಗಶ್ರೀ ಫ್ರೆಂಡ್ಸ್ (ಎ), ದ್ವಿತೀಯ -ಶ್ರೀ ವಿಷ್ಣು ಕುಡೆಂಬಿ ಪಡೆದುಕೊಂಡಿತು. ಪುರುಷರ ರಿಲೇ ಓಟ,ಪುರುಷರ ಕೆಸರು ಗದ್ದೆ ಓಟದ ಸ್ಪರ್ಧೆ ಮತ್ತು 50 ವರ್ಷ ಮೇಲ್ಪಟ್ಟವರ ಓಟದ ಸ್ಪರ್ಧೆಯು ನಡೆಯಿತು. ಬಳಿಕ ರಾತ್ರಿ
ನಡೆದಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು. ಅಧ್ಯಕ್ಷತೆಯನ್ನು ಆಲೆಟ್ಟಿ ಪಂಚಾಯತ್ ಸದಸ್ಯ ಚಂದ್ರಕಾಂತ್ ನಾರ್ಕೋಡು ರವರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ.ರೇಣುಕಾ ಪ್ರಸಾದ್ ಕೆ.ವಿ ಯವರು ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು. ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಆಡಳಿತಾಧಿಕಾರಿ ಉಜ್ವಲ್ ಯು.ಪಿ, ನಿವೃತ್ತ ಸೈನಿಕ ಗಂಗಾಧರ ಗೌಡ ಕಲ್ಲಿಂಬಿ, ಆಲೆಟ್ಟಿ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ ,ಸುಳ್ಯ ಕ್ರೀಡಾ ಭಾರತಿ ಅಧ್ಯಕ್ಷ ಎ.ಸಿ. ವಸಂತ, ಎ.ಪಿ.ಎಂ.ಸಿ.ನಿರ್ದೇಶಕ ಜಯಪ್ರಕಾಶ್ ಕುಂಚಡ್ಕ, ‌ಆಲೆಟ್ಟಿ ಸೊಸೈಟಿ ನಿರ್ದೇಶಕ ಕರುಣಾಕರ ಹಾಸ್ಪಾರೆ,
ವಿಕ್ರಮ
ಯುವಕ ಮಂಡಲದ ಗೌರವಾಧ್ಯಕ್ಷ ಬಾಲಕೃಷ್ಣ ಗೌಡ ಕುಂಚಡ್ಕ, ಕಾರ್ಯದರ್ಶಿ ರಾಜೇಶ್ ಆನೆಕಲ್ಲು ಉಪಸ್ಥಿತರಿದ್ದರು.

ಯುವಕ ಮಂಡಲದ ಅಧ್ಯಕ್ಷ ಪ್ರಶಾಂತ್ ಕೋಲ್ಚಾರು ಸ್ವಾಗತಿಸಿ, ವಂದಿಸಿದರು. ಗೌರವಾಧ್ಯಕ್ಷ ವಿಖ್ಯಾತ್ ಬಾರ್ಪಣೆ ಕಾರ್ಯಕ್ರಮ ನಿರೂಪಿಸಿದರು. ಯುವಕ ಮಂಡಲದ ಪದಾಧಿಕಾರಿಗಳು ಹಾಗೂ ಸದಸ್ಯರು ಸಮವಸ್ತ್ರ ಧರಿಸಿ ಸ್ವಯಂ ಸೇವಕರಾಗಿ ಸಹಕರಿಸಿದರು. ಗದ್ದೆಯ ಸುತ್ತ ಮುತ್ತ ಕೇಸರಿ ಬಂಟಿಂಗ್ಸ್ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಆಗಮಿಸಿದ ಸರ್ವರಿಗೂ ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಪಂದ್ಯಾಟ ವೀಕ್ಷಿಸಲು ಅಚ್ಚು ಕಟ್ಟಾದ ವ್ಯವಸ್ಥೆ ಮಾಡಲಾಗಿತ್ತು.