ಗ್ರಾಮ್ ಒನ್ ಸೇವಾ ಕೇಂದ್ರ : ಅರಂತೋಡು ಪ್ರಥಮ

0

ತಾಲೂಕು ಆಡಳಿತದಿಂದ ಗೌರವ

ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಲ್ಲೊಂದಾದ ಗ್ರಾಮ್ ಒವ್ ಸೇವಾ ಕೇಂದ್ರದ ಮೂಲಕ ಗ್ರಾಮೀಣ ಭಾಗದಲ್ಲಿ ಅತ್ಯುತ್ತಮ ಸೇವೆ ನೀಡಿದ ಫ್ರಾಂಚೈಸಿ ಗಳನ್ನು ಸುಳ್ಯ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಜರುಗಿದ 74 ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಗೌರವಿಸಲಾಯಿತು.

ಪ್ರಥಮ ಸ್ಥಾನವನ್ನು ಅರಂತೋಡು ಗ್ರಾಮ್ ಒನ್ ಸೇವಾ ಕೇಂದ್ರದ ಮಂಜುನಾಥ್ ಪೈ ಅರಂಬೂರು, ದ್ವಿತೀಯ ಸ್ಥಾಮವನ್ನು ಧರ್ಮಾವತಿ ಜಿ ಸಂಪಾಜೆ ಸೇವಾ ಕೇಂದ್ರ ಹಾಗೂ ತೃತೀಯ ಸ್ಥಾನವನ್ನು ಕೃತೇಶ್ ಎಂ.ಸಿ. ಆಲೆಟ್ಟಿ ಪಡೆದುಕೊಂಡರು.

ತಹಶೀಲ್ದಾರ್ ಅನಿತಾಲಕ್ಷ್ಮೀ, ನ.ಪಂ. ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ , ಇ.ಒ. ಭವಾನಿಶಂಕರ್ ವೇದಿಕೆಯಲ್ಲಿದ್ದ ಅತಿಥಿಗಳೆಲ್ಲರೂ ರವರು ಗೌರವಿಸಿದರು.