ತುಳಸಿ ಕುಕ್ಕುಂದ್ರಡ್ಕ ನಿಧನ

0

ಹರಿಹರ ಪಲ್ಲತಡ್ಕ ಗ್ರಾಮದ ದಿ।ರಾಮಣ್ಣನಾಯ್ಕ ರ ಪತ್ನಿ ತುಳಸಿ ಕುಕ್ಕುಂದ್ರಡ್ಕ ಜ.25 ರಂದು ಅಲ್ಪಕಾಲದ ಅಸೌಖ್ಯತೆಯಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 70 ವರ್ಷ ವಯಸ್ಸಾಗಿತ್ತು. ಮೃತರು ಮಕ್ಕಳಾದ ಹರೀಶ್ಚಂದ್ರ, ನವೀನ, ಶ್ರೀಮತಿ ಜಯಲಕ್ಷ್ಮಿ ಜನಾರ್ದನ ಸುಳ್ಯ, ಶ್ರೀಮತಿ ಸರಸ್ವತಿ ಶಿವರಾಮ ಪೆರ್ಲಂಪಾಡಿ, ಶ್ರೀಮತಿ ದೇವಿಕಾ ಕೇಶವ ಅಂಜೇರಿ ನಡುಗಲ್ಲು ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.