ಚಿರತೆ ದಾಳಿಗೆ ದನ ಬಲಿ

0

ಆಲೆಟ್ಟಿ ಗ್ರಾಮದ ಕುಂಚಡ್ಕ ಭಾಗದಲ್ಲಿ ಚಿರತೆ ದಾಳಿಯಿಂದ ದನವೊಂದು ಸಾವಿಗೀಡಾದ ಘಟನೆ ಕಳೆದ ರಾತ್ರಿ ವರದಿಯಾಗಿದೆ.
ಕುಂಚಡ್ಕ ನಿವಾಸಿ ದೊಡ್ಡಯ್ಯ ಗೌಡ ರವರ ದನ ಮೇಯಲು ಹೋದ ಸಂದರ್ಭದಲ್ಲಿ ಚಿರತೆ ಹಠತ್ತಾಗಿ ದಾಳಿ ಮಾಡಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಈ ಹಿಂದೆಯು ಪರಿಸರದಲ್ಲಿ ಚಿರತೆ ಆಗಾಗ ಕಂಡು ಬರುತ್ತಿತ್ತು ಎನ್ನಲಾಗಿದೆ. ದನದ ವಾರಸುದಾರರು ಸಂಬಂಧ ಪಟ್ಟ ಇಲಾಖೆಗೆ ವಿಷಯ ತಿಳಿಸಿರುತ್ತಾರೆ.

ಇಲಾಖೆಯ ಅಧಿಕಾರಿ ಗಳು ಬಂದ ನಂತರ ದನವನ್ನು ಹೊಂಡ ತೆಗೆದು ದಫನ ಕಾರ್ಯ ಮಾಡಲಾಗಿದೆ.

LEAVE A REPLY

Please enter your comment!
Please enter your name here