ಸುಳ್ಯ ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನ ಬ್ರಹ್ಮಕಲಶೋತ್ಸವ : ಧಾರ್ಮಿಕ ಸಭೆ

0

ಬ್ರಹ್ಮಕಲಶೋತ್ಸವದಿಂದ ದೇವರ ಚೈತನ್ಯ ವೃದ್ಧಿ : ವಿದ್ಯಾಪ್ರಸನ್ನ ಶ್ರೀ

ಧರ್ಮದ ಹಾಗೂ ನಮ್ಮೊಳಗಿನ ಭಕ್ತಿಯ ಜಾಗೃತಿಗಾಗಿ ದೇವಸ್ಥಾನಗಳ ನಿರ್ಮಾಣವಾಗುತ್ತಿದೆ. ದೇವರ ಪಾಣಿಪೀಠ ಮತ್ತು ಪ್ರತಿಮೆಯ ಮಧ್ಯೆ ಹಾಕಿರುವ ಅಷ್ಟಬಂಧದ ಆಯಸ್ಸು 12 ವರ್ಷಕ್ಕೆ ಕ್ಷೀಣವಾಗುತ್ತದೆ. ಆದ್ದರಿಂದ ಪ್ರತೀ 12 ವರ್ಷಕ್ಕೆ ಬ್ರಹ್ಮಕಲಶೋತ್ಸವ ಆಗಬೇಕು. ಇದರಿಂದ ದೇವರ ಚೈತನ್ಯಕ್ಕೆ ಬಲ ಬರುತ್ತದೆ. ಊರವರಿಗೂ ಒಳ್ಳೆಯದಾಗುತ್ತದೆ ಎಂದು ಸುಬ್ರಹ್ಮಣ್ಯ ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಸುಳ್ಯ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನಡೆಯುತ್ತಿರುವ ಅಷ್ಟ ಬಂಧ ಬ್ರಹ್ಮಕಲಶೋತ್ಸವದ ಜ.31 ರ ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಿ.ಕೆ. ಉಮೇಶ್ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅಭ್ಯಾಗತರಾಗಿದ್ದ ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ,
ಸುಳ್ಯ ಚೆನ್ನಕೇಶವ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ, ಉದ್ಯಮಿ ಸುಧಾಕರ ಕಾಮತ್ ಜಾಲ್ಸೂರು ಭಾಗವಹಿಸಿದರು.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೆ.ಕೃಷ್ಣ ಕಾಮತ್ ಅರಂಬೂರು, ಪ್ರಧಾನ ಕಾರ್ಯದರ್ಶಿ ಎ.ಟಿ. ಕುಸುಮಾಧರ್, ಕೋಶಾಧಿಕಾರಿ ಹರೀಶ್ ರೈ ಉಬರಡ್ಕ, ಸಮಿತಿಯ ಉಪಾಧ್ಯಕ್ಷರುಗಳಾದ ಎನ್.ಜಯಪ್ರಕಾಶ್ ರೈ, ಬುದ್ಧ ನಾಯ್ಕ, ಬಾಲಗೋಪಾಲ ಸೇರ್ಕಜೆ, ಹರೀಶ್ ಬೂಡುಪನ್ನೆ, ದಯಾನಂದ ಸಾಲ್ಯಾನ್, ಶಶಿಧರ್ ಶೆಟ್ಟಿ ಪಡ್ಪು, ಕೇಶವ ಸಿ.ಎ., ಕಂಜಳ ನಾವೂರು, ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ಡಿ.ಎಸ್.ಗಿರೀಶ್, ಎನ್.ಆನಂದ, ನಾರಾಯಣ ಕಾಯರ್ತೋಡಿ, ಕೃಷ್ಣ ಬೆಟ್ಟ, ಪರಮ್ ಸುಳ್ಯ, ಶ್ರೀಮತಿ ನಮಿತಾ, ಶ್ರೀಮತಿ ಅನಂತೇಶ್ವರಿ ಉಪಸ್ಥಿತರಿದ್ದರು.

ಬ್ರಹ್ಮಕಲಶೋತ್ಸವ ಆರ್ಥಿಕ ಸಮಿತಿ ಸಂಚಾಲಕ ನಾರಾಯಣ ಕೇಕಡ್ಕ ಸ್ವಾಗತಿಸಿದರು. ದೇವಿಪ್ರಸಾದ್ ಕಾಯರ್ತೋಡಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here