ಮಣಿಪಾಲ್ ಮ್ಯಾರಥಾನ್ ನಲ್ಲಿ ಜಸ್ಮಿತಾ ಕೊಡೆಂಕಿರಿ ಪ್ರಥಮ

0

ಮಣಿಪಾಲ್ ಮ್ಯಾರಥಾನ್ 18ರಿಂದ 30ರ ವಯೋಮಾನದ 42ಕಿ.ಮೀ. ಮ್ಯಾರಥಾನ್ ಸ್ಪರ್ಧೆಯಲ್ಲಿ ಜಸ್ಮಿತಾ ಕೊಡೆಂಕಿರಿ ಪ್ರಥಮ ಸ್ಥಾನದೊಂದಿಗೆ ರೂ.‌15,000/- ನಗದು ಪುರಸ್ಕಾರ ಪಡೆದುಕೊಂಡಿದ್ದಾರೆ. ಮಂಗಳೂರಿನ ಕೇಂಬ್ರಿಡ್ಜ್ ಶಾಲೆಯಲ್ಲಿ ದೈಹಿಕ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಇವರು ಬಳ್ಪ ಗ್ರಾಮದ ಕೊಡೆಂಕಿರಿ ವಾಚಣ್ಣ ಗೌಡ ಮತ್ತು ದಮಯಂತಿ ದಂಪತಿಯ ಪುತ್ರಿ.