ಬೊಳುಬೈಲು: ಕಾರು – ಜೀಪ್ ಢಿಕ್ಕಿ ಜಖಂ

0


ಕಾರು ಹಾಗೂ ಜೀಪು ಪರಸ್ಪರ ಢಿಕ್ಕಿ ಹೊಡೆದ ಪರಿಣಾಮವಾಗಿ ಎರಡೂ ವಾಹನಗಳು ಜಖಂಗೊಂಡ ಘಟನೆ ಫೆ.16ರಂದು ಅಪರಾಹ್ನ ಜಾಲ್ಸೂರು ಗ್ರಾಮದ ಬೊಳುಬೈಲಿನಲ್ಲಿ ಸಂಭವಿಸಿದೆ.


ಪುತ್ತೂರು ಕಡೆಯಿಂದ ಸುಳ್ಯ ಕಡೆಗೆ ತೆರಳುತ್ತಿದ್ದ ಕಾರು ಸುಳ್ಯದಿಂದ ಪುತ್ತೂರು ಕಡೆಗೆ ತೆರಳುತ್ತಿದ್ದ ಜೀಪು ಬೊಳುಬೈಲಿನ ಅರ್ಜುನ್ ಗ್ಯಾರೇಜು ಬಳಿ ಮುಖಾಮುಖಿ ಢಿಕ್ಕಿ ಹೊಡೆಯಿತೆನ್ನಲಾಗಿದೆ. ಪರಿಣಾಮವಾಗಿ ಕಾರಿನ ಮುಂಭಾಗದ ಟಯರ್ ಪಂಕ್ಚರ್ ಆಗಿದ್ದು, ಜೀಪಿನ ಮುಂಭಾಗವೂ ಜಖಂಗೊಂಡಿದೆ. ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.