ಕಳಂಜ ಬಾಳಿಲ ಸೊಸೈಟಿ ಯ ಕೋಟೆಮುಂಡುಗಾರಿನ ಪ್ರಧಾನ ಕಛೇರಿ ಆವರಣದಲ್ಲಿ ಪುಸ್ತಕ ಗೂಡು ಉದ್ಘಾಟನೆ

0

ಕಳಂಜ ಗ್ರಾಮ ಪಂಚಾಯತ್ ಆಶ್ರಯದಲ್ಲಿ, ಕಳಂಜ ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕೋಟೆಮುಂಡುಗಾರಿನ ಪ್ರಧಾನ ಕಛೇರಿ ಆವರಣದಲ್ಲಿ ನಿರ್ಮಿಸಿದ ಪುಸ್ತಕ ಗೂಡನ್ನು ಸೊಸೈಟಿ ಅಧ್ಯಕ್ಷ ಎನ್ ಕೂಸಪ್ಪ ಗೌಡ ಮುಗುಪ್ಪು ಫೆ.28 ರಂದು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಶಾಂತ್ ಕುಮಾರ್ ಕೆ, ಉಪಾಧ್ಯಕ್ಷರಾದ ಗಣೇಶ್ ರೈ, ಸದಸ್ಯರಾದ ಕಮಲ, ಸುಧಾ, ಬಾಲಕೃಷ್ಣ, ಕಾರ್ಯನಿರ್ವಾಹಣಾಧಿಕಾರಿ ರಮೇಶ್ ನಾಯಕ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪದ್ಮಯ್ಯ ಕೆ, ಗ್ರಂಥಾಪಾಲಕಿ ಪುಷ್ಪವಾತಿ ಎಂ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಗ್ರಾ.ಪಂ ಸಿಬ್ಬಂದಿ ಗಿರಿಧರ ಕೆ ಪ್ರಸ್ತಾವಿಕ ಮಾತಾಡಿ ಸ್ವಾಗತಿಸಿದರು, ಪದ್ಮಯ್ಯಕೆ ವಂದಿಸಿದರು.