ಬಾಳಿಲ: ರಾಷ್ಟ್ರೀಯ ವಿಜ್ಞಾನ ದಿನಾಚರಣೆ

0

ವಿದ್ಯಾ ಬೋಧಿನಿ ಪ್ರೌಢಶಾಲೆಯಲ್ಲಿ ದಿನಾಂಕ 28–2 –2023 ರಂದು ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಆಚರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಯಶೋಧರ ನಾರಾಲು ವಿಜ್ಞಾನ ದಿನಾಚರಣೆಯ ಮಹತ್ವವನ್ನು ತಿಳಿಸಿದರು .ಗಣಿತ ಶಿಕ್ಷಕರಾದ ಉದಯ್ ಕುಮಾರ್ ರೈ ಎಸ್ ಪ್ರಸ್ತಾವನೆ ಗೈದರು. ವಿಜ್ಞಾನ ಶಿಕ್ಷಕರಾದ ಮೋಹನ ಕೆ ಸಿ ರಾಮನ್ ಪರಿಣಾಮದ ಬಗ್ಗೆ ತಿಳಿಸಿದರು.

ವಿದ್ಯಾರ್ಥಿ ಕಾರ್ತಿಕ್ ಸಿವಿ ರಾಮನ್ ಅವರ ಸಾಧನೆ ಬಗ್ಗೆ ತಿಳಿಸಿದರು. ವಿದ್ಯಾರ್ಥಿ ನಿಯರಾದ ಸಿಂಚನ ಮತ್ತು ಸೃಷ್ಟಿ ಆರಂಭ ಗೀತೆ ಹಾಡಿದರು. ವಿದ್ಯಾರ್ಥಿ ಶಿವಕೃಷ್ಣ ಇವರು ಎಲ್ಲರನ್ನೂ ಸ್ವಾಗತಿಸಿದರು. ವಿದ್ಯಾರ್ಥಿನಿ ಪ್ರತೀಕ ವಂದಿಸಿದರು. ವಿದ್ಯಾರ್ಥಿನಿಯರಾದ ಚಿಂತನ ಮತ್ತು ಚೈತನ್ಯ ಕಾರ್ಯಕ್ರಮ ನಿರೂಪಿಸಿದರು .ಕಾರ್ಯಕ್ರಮದಲ್ಲಿ ವಿಶೇಷವಾಗಿ ವಿಜ್ಞಾನ ಮಾದರಿ ಪ್ರದರ್ಶನ ಏರ್ಪಡಿಸಲಾಯಿತು .