ಕೊಯಿಲ ಶ್ರೀ ಮಹಾಮ್ಮಾಯಿ ದೇವಸ್ಥಾನದಲ್ಲಿ ವಾರ್ಷಿಕ ಮಹಾಪೂಜೆ

0

ಐವರ್ನಾಡು ಗ್ರಾಮದ ಕೊಯಿಲ ಮಹಾಮ್ಮಾಯಿ ದೇವಸ್ಥಾನದಲ್ಲಿ ವಾರ್ಷಿಕ ಮಹಾಪೂಜೆ ಮಾ.03 ರಂದು ನಡೆಯಿತು.
ಫೆ.23 ರಂದು ಗೊನೆ ಕಡಿಯಲಾಯಿತು.


ಮಾ.01 ರಂದು ಕಲಶ ಸ್ನಾನ, ಭಂಡಾರ ಶುದ್ದೀಕರಣ ನಡೆಯಿತು.
ಮಾ.02 ರಂದು ರಾತ್ರಿ ಹರಕೆ ಒಪ್ಪಿಸಲಾಯಿತು.ಪೂಜಾ ಸ್ಥಳ ಶುದ್ದೀಕರಣ, ಪೂಜಾ ಸ್ಥಳಕ್ಕೆ ಭಂಡಾರ ಹೊರಡುವುದು,ಅಮ್ಮನವರಿಗೆ ಪೂಜಾ ಗುಂಡ ಒಪ್ಪಿಸುವುದು ನಡೆಯಿತು.
ರಾತ್ರಿ ದೇವದೂತರಿಗೆ ಬಲಿ ಕೊಡಲಾಯಿತು.


ಮಾ.03 ರಂದು ಮಧ್ಯಾಹ್ನ ಗಂಟೆ ಶ್ರೀ ಮಹಾಮ್ಮಾಯಿ ಅಮ್ಮನವರ ಮಹಾಪೂಜೆ ಹಾಗೂ ಪ್ರಸಾದ ವಿತರಣೆ,ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರರು ಹಾಗೂ ಕೊಯಿಲ ಹತ್ತು ಸಮಸ್ತರು, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ನೂರಾರು ಜನ ಭಕ್ತಾದಿಗಳು ಉಪಸ್ಥಿತರಿದ್ದರು.