ಗ್ರಾಮದ ಅಭಿವೃದ್ಧಿ ಸಹಿಸಲಾಗದೇ ಜಿಲ್ಲಾಧಿಕಾರಿಗಳಿಗೆ ಬೇನಾಮಿ ಅರ್ಜಿಯಲ್ಲಿ ಸುಳ್ಳು ದೂರು

0

ಲಂಚ, ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತಿದ್ದೇವೆ : ಅಜ್ಜಾವರ ಗ್ರಾ.ಪಂ. ಅಧ್ಯಕ್ಷರ ಪ್ರತಿಕಾಗೋಷ್ಠಿ

ಅಜ್ಜಾವರ ಗ್ರಾಮ ಪಂಚಾಯತ್ ನಲ್ಲಿ ಯಾವುದೇ ಕೆಲಸಕ್ಕೂ ಯಾರೂ ಲಂಚ ನೀಡಬೇಕಾಗಿಲ್ಲ. ನಾವ್ಯಾರೂ ಸ್ವೀಕರಿಸುವುದೂ ಇಲ್ಲ. ಪಂಚಾಯತ್ ಗೆ ಬರುವ ಸವಲತ್ತು ಗಳು ಅರ್ಹರಿಗೆ ದೊರೆಯುತ್ತದೆ.‌ ನಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಆಗುತ್ತಿರುವ ಅಭಿವೃದ್ಧಿ ಕೆಲಸಗಳನ್ನು ಸಹಿಸದೆ ಕೆಲವರು ಜಿಲ್ಲಾಧಿಕಾರಿ ಗಳಿಗೆ ಬೇನಾಮಿ ಅರ್ಜಿಗಳನ್ನು‌ ಬರೆದು ದೂರುತ್ತಿದ್ದು ಅದು ಸತ್ಯಕ್ಕೆ ದೂರವಾಗಿದೆ ಎಂದು ಅಜ್ಜಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಸತ್ಯವತಿ ಬಸವನಪಾದೆ ಹೇಳಿದ್ದಾರೆ.

ಇಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು,”ಪಂಚಾಯತ್ ನಲ್ಲಿ ಎಲ್ಲ ಕೆಲಸಕ್ಕೆ ದುಡ್ಡುಕೊಡಬೇಕು. ಅರ್ಹರಿಗೆ ಸವಲತ್ತು ಸಿಗುತ್ತಿಲ್ಲ ಇತ್ಯಾದಿ ವಿವರ ಬರೆದು ಜಿಲ್ಲಾಧಿಕಾರಿ ಗಳಿಗೆ ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ಎಂಬ ಹೆಸರಲ್ಲಿ ದೂರಿಕೊಳ್ಳಲಾಗಿದೆ. ಅದು ಸತ್ಯಕ್ಕೆ ದೂರವಾಗಿದೆ. ನಾನು ಅಧ್ಯಕ್ಷ ಳಾದ ಬಳಿಕ ಭ್ರಷ್ಟಾಚಾರ ಮಾಡದೇ ಆಡಳಿತ ನೀಡುತ್ತಿದ್ದೇವೆ. ಸರಕಾರದ ಸವಲತ್ತು ಅರ್ಹರಿಗೆ ಸಿಗುತ್ತಿವೆ. ನನ್ನ ಕಾರ್ಯವೈಖರಿ ನೋಡಿ ವಿಪಕ್ಷ ಸದಸ್ಯರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ನಮ್ಮ ಅವಧಿಯಲ್ಲಿ ಗ್ರಾಮಕ್ಕೆ ಎರಡೂವರೆ ಕೋಟಿ ಅನುದಾನ ಸಚಿವ ಅಂಗಾರರ ಮೂಲಕ ಬಂದಿದೆ. ಗ್ರಾಮದಲ್ಲಿ ಕುಡಿಯುವ ನೀರು, ದಾರಿ ದೀಪ, ವಸತಿ ಯೋಜನೆಗಳ ಯೋಜನೆ ಸಮಪರ್ಕವಾಗಿ ನಡೆದಿದೆ. ಇವಿಷ್ಟೇ ಅಲ್ಲದೆ ಈ ಹಿಂದೆ ನಮ್ಮ ಗ್ರಾಮ ಪಂಚಾಯತ್ ನಿಂದ ಸರಕಾರದ ಆದೇಶದಂತೆ ಅನುಮತಿ ಪಡೆಯಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ದರ್ಗಾ ಸಮಿತಿ ಸುಳ್ಳನ್ನು ಹೇಳಿದೆ. ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿರುವ ಬಗ್ಗೆ ಪಂಚಾಯತ್ ಗೆ ಮಾಹಿತಿ ನೀಡಿಲ್ಲ. ನಾವು ಅವರ ಅರ್ಜಿಗೆ ಷರತ್ತುಗಳನ್ನು ಹಾಕಿ ಹಿಂಬರಹವನ್ನು ನೀಡಿದ್ದು ಅದನ್ನೇ ಅವರು ನಿರಾಕ್ಷೇಪಣಾ ಪತ್ರವೆಂದು ಬಿಂಬಿಸಿದ್ದಾರೆ.
ಅದನ್ನು ನಾವು ಪೋಲೀಸ್, ಕಂದಾಯ, ತಾ.ಪಂ. ಹಾಗೂ ನ್ಯಾಯಾಲಯಕ್ಕೆ ರದ್ದುಪಡಿಸಿರುವ ಪ್ರತಿಗಳನ್ನು ಕಳುಹಿಸಿದ್ದೇವೆ ಎಂದವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಅಂಬೇಡ್ಕರ್ ಆದರ್ಶ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಚಂದ್ರಶೇಖರ ಪಲ್ಲತಡ್ಕ, ತಾಲೂಕು ಅಧ್ಯಕ್ಷ ಸತೀಶ್ ಬೂಡುಮಕ್ಕಿ, ಗ್ರಾಮ ಸಮಿತಿ ಅಧ್ಯಕ್ಷ ಹರೀಶ್ ಮಾತನಾಡಿ, “ನಮ್ಮ ಸಂಘಟನೆಯ ಹೆಸರಲ್ಲಿ ಬೇನಾಮಿ ಅರ್ಜಿಗಳು ಹೋಗುತ್ತಿದೆ.‌ ನಾವು ಯಾರ ಬಗ್ಗೆಯೂ ಜಿಲ್ಲಾಧಿಕಾರಿಗಳಿಗೆ ದೂರು ಮಾಡಿಲ್ಲ. ನಮ್ಮ ಹೆಸರನ್ನು ದುರ್ಬಳಕೆ ‌ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ.

ಈ ಹಿಂದೆ ಕೆಂಪು‌ಕಲ್ಲು ತಡೆದಿರುವುದು, ಮರಳು ಗಾರಿಕೆ ತಡೆಗೂ ನಮ್ಮ ಹೆಸರನ್ನೇ ಎಳೆದು ತರಲಾಗುತ್ತಿದೆ.‌ಇದು ಸರಿಯಲ್ಲ.‌ಅಜ್ಜಾವರ ಗ್ರಾಮದಲ್ಲಿ‌ ಇತ್ತೀಚಿನ ದಿನದಲ್ಲಿ ಉತ್ತಮ ಅಭಿವೃದ್ಧಿ ‌ಕೆಲಸಗಳು ಆಗುತ್ತಿದೆ.‌ ಸವಲತ್ತುಗಳು ಅರ್ಹರಿಗೆ ದೊರೆಯುತ್ತಿದೆ. ಇದನ್ನು ನಾವು ಗಮನಿಸಿದ್ದೇವೆ ಎಂದವರು ಹೇಳಿದರು.