ಸೋಣಂಗೇರಿ: ಚುನಾವಣಾ ಬಹಿಷ್ಕಾರಕ್ಕೆ ಗ್ರಾಮಸ್ಥರ ಸಿದ್ಧತೆ

0

ಜಾಲ್ಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಸೋಣಂಗೇರಿ ಒಂದನೇ ವಾರ್ಡಿನಲ್ಲಿ ಪ್ರಮುಖ ಕೆಲವೊಂದು ಸಮಸ್ಯೆಗಳು ಮತ್ತು ಜನರ ಬೇಡಿಕೆಗಳು ಇದುವರೆಗೆ ಇತ್ಯರ್ಥವಾಗದ ಹಿನ್ನೆಲೆಯಲ್ಲಿ ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸಲು ಈ ಭಾಗದ ಜನರು ತೀರ್ಮಾನಿಸಿರುವುದಾಗಿ ತಿಳಿದುಬಂದಿದೆ.

ಸೋಣಂಗೇರಿ ಒಂದನೇ ವಾರ್ಡಿನ ಪ್ರಮುಖ ಸಮಸ್ಯೆ ಮತ್ತು ಜನರ ಬೇಡಿಕೆಗಳಾದ ಜಿಬ್ಬಡ್ಕ-ಗುಂಡ್ಯಡ್ಕ ರಸ್ತೆ ನಿರ್ಮಾಣ, ಗೋಂಟಡ್ಕದಲ್ಲಿ ಸರಿಯಾಗಿ ಕಾರ್ಯಾಚರಿಸದ ಬಿ.ಎಸ್.ಎನ್.ಎಲ್. ಮೊಬೈಲ್ ಟವರ್ , ಇಪ್ಪತ್ತು ವರ್ಷ ಕಳೆದರೂ ಪಹಣಿ ಪತ್ರದಲ್ಲಿ ನೋಂದಣಿಯಾಗದ ಸುಡುಕೇರಿ- ಅಜಕಳಮೂಲೆ, ಬೇಲ್ಯ ಪ.ಜಾತಿ ಮತ್ತು ಪ.ಪಂಗಡ ಕಾಲೋನಿಯ ಸಮಸ್ಯೆ, ಕುಕ್ಕಂದೂರು -ಸೋಣಂಗೇರಿ ತಮಿಳು ಪುನರ್ವಸತಿದಾರರಿಗೆ ನಿವೇಶನ ದೊರಕದಿರುವುದು, ಸೋಣಂಗೇರಿ ಜಾಲ್ಸೂರು ರಸ್ತೆ ಅಗಲೀಕರಣ ಕಾಮಗಾರಿಯಲ್ಲಿ ಎಲ್ಲಾ ಕಡೆ ಸಮರ್ಪಕ ರೀತಿಯಲ್ಲಿ ಮಾಡದಿರುವುದು, ಸೋಣಂಗೇರಿ ಬಸ್ಸು ತಂಗುದಾಣ ಮತ್ತು ಸಾರ್ವಜನಿಕ ಶೌಚಾಲಯ ನಿರ್ಮಾಣ , ರಸ್ತೆ ಅಗಲೀಕರಣ ಕಾಮಗಾರಿಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸುವ ಕಂಬಗಳು ಮತ್ತು ಅಪಾಯಕಾರಿ ಮರಗಳನ್ನು ತೆರವುಗೊಳಿಸದಿರುವುದು, 94ಸಿ ಮತ್ತು ಅಕ್ರಮ ಸಕ್ರಮ ಬಾಕಿ ಇರುವ ಕಡತಗಳು ಮುಂತಾದ ಜನಸಾಮಾನ್ಯರಿಗೆ ನಿತ್ಯ ಜೀವನದಲ್ಲಿ ಆಗಬೇಕಿರುವ ಅನೇಕ ಸಮಸ್ಯೆಗಳು ಇತ್ಯರ್ಥ ಆಗಿರದ ಹಿನ್ನೆಲೆಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸಲು ಸೋಣಂಗೇರಿ ಒಂದನೇ ವಾರ್ಡಿನ ಜನರು ತೀರ್ಮಾನಿಸಿದ್ದು, ಇದಕ್ಕಾಗಿ ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.