ಅರಂತೋಡು ದುರ್ಗಾಮಾತಾ ಭಜನಾ ಮಂದಿರದಲ್ಲಿ ಏಕಾಹ ಭಜನೆ ಮತ್ತು ದುರ್ಗಾ ಪೂಜೆ, ಹೂವಿನ ಪೂಜೆ

0

ಅರಂತೋಡು ಶ್ರೀ ದುರ್ಗಾಮಾತಾ ಭಜನಾ ಮಂದಿರ ,ಶ್ರೀ ಮಲ್ಲಿಕಾರ್ಜುನ ಭಜನಾ ಮಂಡಳಿಯ ವತಿಯಿಂದ ಮಾ.1 ರಂದು ನಗರ ಭಜನೆ ಹಾಗೂ ಶ್ರೀ ದುರ್ಗಾ ಪೂಜೆ ಮತ್ತು ಹೂವಿನ ಪೂಜೆಯು ನಡೆಯಿತು.

ಮಾ.2 ರಂದು ವರ್ಷಂಪ್ರತಿ ಜರುಗುವ ಏಕಾಹ ಭಜನೆಯು ಬೆಳಗ್ಗೆ ಸೂರ್ಯೋದಯದಿಂದ ಮರುದಿನ ಸೂರ್ಯೋದಯದ ಪರ್ಯಂತ ತಾಲೂಕಿನ ವಿವಿಧ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಸಂಕೀರ್ತನೆಯು ನಡೆಯಿತು. ಮಂದಿರದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದರು. ಆಗಮಿಸಿದ ಭಕ್ತಾದಿಗಳಿಗೆ ಪ್ರಸಾದ ವಿತರಣೆಯಾಯಿತು.